
ಕೆಎಸ್ಸಾರ್ಟಿಸಿಯ ದರ್ಜೆ-3ರ ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಡಿ. 31ರ ಸಂಜೆ 5.30ರವರೆಗೆ ವಿಸ್ತರಿಸಲಾಗಿದೆ.ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ನ. 30 ಕೊನೆಯ ದಿನಾಂಕವಾಗಿತ್ತುಆದರೆ, ನೌಕರರ ಅನುಕೂಲಕ್ಕಾಗಿ ಇದೀಗ ಅವಧಿ ವಿಸ್ತರಿಸಿರುವಕೆಎಸ್ಸಾರ್ಟಿಸಿ ಡಿ. 31ರವರೆಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಸುವವರು KSRTC ವೆಬ್ಸೈಟ್ www.ksrtc.org/transferನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

