HomeLatest Newsಎಲೆಕ್ಟ್ರಾನಿಕ್ ಚಿಪ್ ತಯಾರಿಕಾ ಕಂಪನಿಯಲ್ಲಿ ಭೀಕರ ಬೆಂಕಿ ಅವಘಡ; ಗೋಡೆ ಕುಸಿತ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ...

ಎಲೆಕ್ಟ್ರಾನಿಕ್ ಚಿಪ್ ತಯಾರಿಕಾ ಕಂಪನಿಯಲ್ಲಿ ಭೀಕರ ಬೆಂಕಿ ಅವಘಡ; ಗೋಡೆ ಕುಸಿತ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ದುರ್ಮರಣ

ನೋಯ್ಡಾ: ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿರುವ ಘಟನೆ ಗ್ರೇಟರ್ ನೋಯ್ಡಾ ಸೆಂಟ್ರಲ್‌ನ ಇಕೋಟೆಕ್ -3 ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ILGIMನಲ್ಲಿ ತಡರಾತ್ರಿ ಭಾರಿ ಬೆಂಕಿ ದುರಂತ ಸಂಭವಿಸಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ. ಆದರೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಕಂಪನಿಯ ಪಕ್ಕದ ಗೋಡೆ ಮತ್ತು ಭಾರವಾದ ಕಬ್ಬಿಣದ ಬೀಮ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಐದು ಅಗ್ನಿಶಾಮಕ ದಳದವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಗ್ನಿಶಾಮಕ ಸಿಬ್ಬಂದಿಗಳಾದ ರೋಹಿತ್ ಯಾದವ್ ಮತ್ತು ಹೆಡ್ ಕಾನ್ಸ್​ಟೇಬಲ್​ ಚಾಲಕ ತಿರತ್‌ಪಾಲ್ ಸಿಂಗ್ ಮೃತ ದುರ್ದೈವಿಗಳು. ದುರಂತದ ನಡುವೆಯೂ ಅಗ್ನಿಶಾಮಕ ದಳದ ತಂಡವು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಇತರ ಮೂವರು ಸಿಬ್ಬಂದಿಗಳಾದ ಹೆಡ್ ಕಾನ್ಸ್​ಟೇಬಲ್​​ ಚಾಲಕ ರಾಜ್‌ಪಾಲ್ ಸಿಂಗ್, ಅಗ್ನಿಶಾಮಕ ಸಿಬ್ಬಂದಿ ಮನೀಶ್ ಕುಮಾರ್ ಮತ್ತು ಅಮಿತ್ ಕುಮಾರ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular