ನಾಪತ್ತೆಯಾದವರನ್ನು ಹುಡುಕಿಕೊಟ್ಟರೆ ಬಹುಮಾನವಾಗಿ ಹಣ ನೀಡುವುದಾಗಿ ಕುಟುಂಬದವರು ಘೋಷಿಸುವುದನ್ನ ಕೇಳಿದ್ದೀರಿ. ದರೋಡೆಕೋರರು, ಕುಖ್ಯಾತ ವ್ಯಕ್ತಿಗಳ ಬಗ್ಗೆ ಸುಳಿವು ನೀಡಿದವರಿಗೂ ಪೊಲೀಸರು ಬಹುಮಾನ ಘೋಷಿಸುತ್ತಾರೆ.
ಕೆಲವೊಮ್ಮೆ ಪ್ರೀತಿಯಿಂದ ಸಾಕಿದ ನಾಯಿ ನಾಪತ್ತೆಯಾದರೆ ಹುಡುಕಿಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಪ್ರಕರಗಳೂ ವರದಿಯಾಗಿವೆ. ಅಂಥದ್ದೇ ಮತ್ತೊಂದು ವಿಶೇಷ ಪ್ರಕರಣದಲ್ಲಿ ನೋಯ್ಡಾದಲ್ಲಿ ಕುಟುಂಬವೊಂದು ಕಳೆದುಹೋಗಿರುವ ತಮ್ಮ ಮುದ್ದಿನ ಬೆಕ್ಕಿನ ಬಗ್ಗೆ ಸುಳಿವು ನೀಡಿದರೆ 1 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ ಘೋಷಿಸಿದೆ. ಈ ಘೋಷಣೆಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಪತ್ತೆಯಾಗಿರುವ ಗಂಡು ಬೆಕ್ಕು ಒಂದೂವರೆ ವರ್ಷದ್ದಾಗಿದ್ದು ಅದಕ್ಕೆ ಚೀಕು ಎಂದು ಹೆಸರಿಡಲಾಗಿದೆ. ಅದರ ಬಣ್ಣ ಮತ್ತು ಗುರುತಿಸುವಿಕೆಗಿರುವ ಇರುವ ವಿಶೇಷತೆಗಳನ್ನು ಹಂಚಿಕೊಂಡು ಇದರ ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ನೀಡಿ ಎಂದು ಪೋಷಕ ಅಜಯ್ ಕುಮಾರ್ 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಬೆಕ್ಕು ಡಿಸೆಂಬರ್ 24 ರಿಂದ ಕಾಣೆಯಾಗಿದೆ ಎಂದು ಹೇಳಲಾಗಿದೆ. ಕಳೆದುಹೋಗಿರುವ ಬೆಕ್ಕಿನ ಪತ್ತೆಗಾಗಿ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುವ ಮೂಲಕ ಪಾಲಕರೊಂದಿಗೆ ಅದನ್ನು ಮತ್ತೆ ಸೇರಿಸಲು ಇಂಟರ್ನೆಟ್ ಬಳಕೆದಾರರು ಮುಂದಾಗಿದ್ದಾರೆ. .
https://twitter.com/SachinGuptaUP/status/1744261676705485134?ref_src=twsrc%5Etfw%7Ctwcamp%5Etweetembed%7Ctwterm%5E1744261676705485134%7Ctwgr%5E9750973cedaf624c0f8bc08bc1e38854e6a86760%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fnoida-pet-parents-announce-1-lakh-reward-on-missing-cat-poster-goes-viral