HomeIndiaಮುಂಬೈ: ಪೋರ್ನೋಗ್ರಫಿ ಕಂಪನಿಯ ಘೋಷವಾಕ್ಯ ಬಿತ್ತರಿಸಿದ ಮೆಟ್ರೋ ನಿಲ್ದಾಣದ ಸಂದೇಶ‌ ಫಲಕ

ಮುಂಬೈ: ಪೋರ್ನೋಗ್ರಫಿ ಕಂಪನಿಯ ಘೋಷವಾಕ್ಯ ಬಿತ್ತರಿಸಿದ ಮೆಟ್ರೋ ನಿಲ್ದಾಣದ ಸಂದೇಶ‌ ಫಲಕ

ಬಿಹಾರದ ಪಟನಾ ರೈಲ್ವೇ ನಿಲ್ದಾಣದ ಜಾಹೀರಾತು ಪರದೆಗಳಲ್ಲಿ ನೀಲಿಚಿತ್ರ ಬಿತ್ತರಗೊಂಡ ಬೆನ್ನಲ್ಲೇ ಮುಂಬಯಿಯ ಮೆಟ್ರೋ ನಿಲ್ದಾಣದಲ್ಲೂ ಸಹ ಪೋರ್ನ್ ಸಂದೇಶವೊಂದು ಬಿತ್ತರಗೊಂಡಿರುವ ಸುದ್ದಿ ವೈರಲ್ ಆಗಿದೆ.

ಮುಂಬಯಿಯ ಅಂಧೇರಿಯ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಮೆಟ್ರೋ ನಿಲ್ದಾಣದ ಬಳಿ ಸಂಚರಿಸುತ್ತಿದ್ದ ಸವಾರರಿಗೆ ಎಲ್‌ಇಡಿ ಪರದೆ ಮೇಲೆ ಹಾಕಿದ್ದ ’ತುಂಟ’ ಸಂದೇಶವೊಂದು ಗ್ರೀಟ್ ಮಾಡಿದೆ. ಈ ಬೋರ್ಡನ್ನು ಯಾರು ಅಳವಡಿಸಿದರು ಎಂಬುದು ಇನ್ನೂ ತಿಳಿದು ಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

’ನಾಟಿ ಅಮೆರಿಕ! ನೋಬಡಿ! ನೋಬಡಿ ಡಸ್ ಇಟ್ ಬೆಟರ್‌! ಓ ಯೇ’ ಎನ್ನುವ ನಾಟಿ ಅಮೇರಿಕ ವಯಸ್ಕರ ಚಿತ್ರಗಳ ಕಂಪನಿಯ ಸಂದೇಶವನ್ನು ಈ ಎಲ್‌ಇಡಿ ಬೋರ್ಡ್‌ನಲ್ಲಿ ಹಾಕಲಾಗಿದೆ. ರಸ್ತೆ ಮುಖಾಂತರ ಹಾದು ಹೋಗುತ್ತಿದ್ದ ಚಾಲಕರು ಈ ಬೋರ್ಡ್‌ನ ಚಿತ್ರಗಳು, ವಿಡಿಯೋಗಳುನ್ನು ತೆಗೆದುಕೊಂಡು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬೋರ್ಡ್‌ನಲ್ಲಿ ಇಂಥ ಸಂದೇಶ ಯಾರು ಹಾಕಿದ್ದು ಹಾಗೂ ಇದರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular