ಆಗಸ್ಟ್ ನಿಂದ ಮುಖ ಚಹರೆ ಹಾಜರಾತಿ ಇಲ್ಲದ ಉದ್ಯೋಗಿಗಳಿಗೆ ಸಂಬಳವಿಲ್ಲ…!

ಮುಂಬೈ: ಫೇಸ್ ಆ್ಯಪ್ ಹಾಜರಾತಿ ಇಲ್ಲದ ಉದ್ಯೋಗಿಗಳಿಗೆ ಸಂಬಳವಿಲ್ಲ ಎಂದು ಮಹಾರಾಷ್ಟ್ರ ಕಂದಾಯ ಸಚಿವ ಬವಾಂಕುಲೆ ಹೇಳಿದ್ದಾರೆ.

ಸರ್ಕಾರದ ಮುಖ ಗುರುತಿಸುವಿಕೆ ಆಧಾರಿತ ‘ಫೇಸ್ ಆ್ಯಪ್’ ಮೂಲಕ ಹಾಜರಾತಿಯನ್ನು ಗುರುತಿಸುವ ಕಂದಾಯ ಇಲಾಖೆಯ ನೌಕರರು ಮಾತ್ರ ಆಗಸ್ಟ್ ತಿಂಗಳ ವೇತನಕ್ಕೆ ಅರ್ಹರಾಗಿರುತ್ತಾರೆ ಎಂದು ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಬುಧವಾರ ತಿಳಿಸಿದ್ದಾರೆ.

ಎಲ್ಲಾ ಕಂದಾಯ ಸಿಬ್ಬಂದಿಗೆ ಫೇಸ್ ಆ್ಯಪ್ ಮತ್ತು ಜಿಯೋ-ಫೆನ್ಸಿಂಗ್ ಬಳಕೆಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ದೇಶನದಡಿ ಈ ಕ್ರಮ ಅನುಸರಿಸಲಾಗಿದೆ. ಹಾಜರಾತಿಯನ್ನು ಈಗ ಅಪ್ಲಿಕೇಶನ್ ಮೂಲಕ ಕಚೇರಿ ಆವರಣದಿಂದಲೇ ಕಟ್ಟುನಿಟ್ಟಾಗಿ ಗುರುತಿಸಬೇಕು. ಪಾಲಿಸಲು ವಿಫಲರಾದ ಉದ್ಯೋಗಿಗಳಿಗೆ ಸಂಬಳವನ್ನು ನೀಡಲಾಗುವುದಿಲ್ಲ. ಈ ಕುರಿತು ಸರ್ಕಾರಿ ಆದೇಶವನ್ನು(ಜಿಆರ್) ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ರಾಯಗಢ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಕಾರ್ಯಾಚರಣೆಗಳನ್ನು ಪರಿಶೀಲಿಸಿದ ನಂತರ ಸಚಿವರು ಮಾತನಾಡಿ, ದಕ್ಷತೆ, ಪಾರದರ್ಶಕತೆ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ, ಸರ್ಕಾರವು ಇಲಾಖೆಗಳಾದ್ಯಂತ 150 ದಿನಗಳ ಕ್ರಿಯಾ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read