HomeLatest News1600 ಸಂಖ್ಯಾ ಸರಣಿಯಿಂದ ಬರುವ ಕರೆಗಳನ್ನು ಯಾವುದೇ ಆ್ಯಪ್ ಬ್ಲಾಕ್ ಮಾಡಲು ಸಾಧ್ಯವಿಲ್ಲ ; TRAI...

1600 ಸಂಖ್ಯಾ ಸರಣಿಯಿಂದ ಬರುವ ಕರೆಗಳನ್ನು ಯಾವುದೇ ಆ್ಯಪ್ ಬ್ಲಾಕ್ ಮಾಡಲು ಸಾಧ್ಯವಿಲ್ಲ ; TRAI ಸ್ಪಷ್ಟನೆ

1600 ಸಂಖ್ಯಾ ಸರಣಿಯಿಂದ ಬರುವ ಕರೆಗಳನ್ನು ಯಾವುದೇ ಕಾಲರ್ ಐಡಿ ಅಥವಾ ಸ್ಪ್ಯಾಮ್ ಬ್ಲಾಕಿಂಗ್ ಆ್ಯಪ್ ತಡೆಯಲು ಸಾಧ್ಯವಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಸ್ಪಷ್ಟಪಡಿಸಿದೆ. ಈ ಸಂಖ್ಯೆಗಳನ್ನು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ವಿಮಾ ಕಂಪನಿಗಳು ಹಾಗೂ ಸರ್ಕಾರಿ ಸಂವಹನಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿಸಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) 1600 ಸಂಖ್ಯಾ ಸರಣಿಯಿಂದ ಬರುವ ಕರೆಗಳ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ. ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ಯಾವುದೇ ಕಾಲರ್ ಐಡಿ ಅಥವಾ ಸ್ಪ್ಯಾಮ್ ಬ್ಲಾಕಿಂಗ್ ಆ್ಯಪ್‌ಗಳು ಬ್ಲಾಕ್ ಮಾಡಲು ಸಾಧ್ಯವಿಲ್ಲ ಎಂದು TRAI ಶುಕ್ರವಾರ ತಿಳಿಸಿದೆ.ಟ್ರೂಕಾಲರ್ (Truecaller) ಸೇರಿದಂತೆ ಕಾಲರ್ ಐಡಿ ಆ್ಯಪ್‌ಗಳೊಂದಿಗೆ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ TRAI ಈ ಸ್ಪಷ್ಟನೆ ನೀಡಿದೆ. 1600 ಸಂಖ್ಯೆಗಳ ಗುರುತಿಸುವಿಕೆ ಮತ್ತು ಫಿಲ್ಟರಿಂಗ್ ಕುರಿತು ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ಈ ಪ್ರಕಟಣೆ ಹೊರಡಿಸಲಾಗಿದೆ.

TRAI ಪ್ರಕಾರ, 140 ಸಂಖ್ಯಾ ಸರಣಿಯಿಂದ ಬರುವ ಪ್ರಚಾರ (Promotional) ಕರೆಗಳನ್ನು ಮಾತ್ರ DND (Do Not Disturb) ನೋಂದಣಿಯ ಮೂಲಕ ನಿಯಂತ್ರಿಸಬಹುದು. ಆದರೆ 1600 ಸಂಖ್ಯಾ ಸರಣಿಯಿಂದ ಬರುವ ಕರೆಗಳಿಗೆ ಯಾವುದೇ ರೀತಿಯ ಟ್ಯಾಗಿಂಗ್ ಅಥವಾ ಫಿಲ್ಟರಿಂಗ್‌ಗೆ ಅನುಮತಿ ಇಲ್ಲ.ಈ 1600 ಸಂಖ್ಯೆಗಳನ್ನು ಬ್ಯಾಂಕಿಂಗ್, ಹಣಕಾಸು ಸೇವೆಗಳು, ವಿಮಾ ಕಂಪನಿಗಳು ಹಾಗೂ ನಿಯಂತ್ರಿತ ಸಂಸ್ಥೆಗಳು ಬಳಸುತ್ತವೆ. ಇವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI), ಸೆಬಿ (SEBI), ಐಆರ್‌ಡಿಎಐ (IRDAI) ಮತ್ತು ಪಿಎಫ್‌ಆರ್‌ಡಿಎ (PFRDA) ನಿಯಂತ್ರಿಸುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಕೆದಾರರು DND ರಿಜಿಸ್ಟ್ರಿಯಲ್ಲಿ ತಮ್ಮ ಆಯ್ಕೆಯನ್ನು ನೋಂದಾಯಿಸುವ ಮೂಲಕ 140 ಸಂಖ್ಯಾ ಸರಣಿಯಿಂದ ಬರುವ ಪ್ರಚಾರ ಕರೆಗಳನ್ನು ಸ್ವೀಕರಿಸಬೇಕೇ ಅಥವಾ ತಡೆಯಬೇಕೇ ಎಂಬುದನ್ನು ನಿರ್ಧರಿಸಬಹುದು. DND ಸೇವೆ ಸಕ್ರಿಯಗೊಳಿಸಿರುವವರಿಗೆ 140 ಸರಣಿಯ ಪ್ರಚಾರ ಕರೆಗಳು ಬರುವುದಿಲ್ಲ ಎಂದು TRAI ತಿಳಿಸಿದೆ. ಇದರ ಮಧ್ಯೆ, 140 ಮತ್ತು 1600 ಸಂಖ್ಯಾ ಸರಣಿಯಿಂದ ಬರುವ ಕರೆಗಳಲ್ಲಿ ಕೆಲವು ಸ್ಪ್ಯಾಮ್ ಕರೆಗಳೂ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಈಗಾಗಲೇ 1600 ಸಂಖ್ಯಾ ಸರಣಿಯ ಕರೆಗಳನ್ನು ಸುಮಾರು 5.25 ಲಕ್ಷ ಮಂದಿ ಸ್ಪ್ಯಾಮ್ ಎಂದು ಗುರುತಿಸಿದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 140 ಮತ್ತು 1600 ಸಂಖ್ಯಾ ಸರಣಿಗಳಿಂದ ಬರುವ ಅನಗತ್ಯ ಕರೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಕೆಲ ತಜ್ಞರು TRAI ನಿಲುವನ್ನು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular