ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಾಮಭಟ್ಟರಪಾಳ್ಯದಲ್ಲಿ ನಡೆದಿದೆ.
22 ವರ್ಷದ ಐಶ್ವರ್ಯ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. 7 ತಿಂಗಳ ಹಿಂದಷ್ಟೇ ಲಕ್ಷ್ಮೀನಾರಾಯಣ ಎಂಬಾತನನ್ನು ಐಶ್ವರ್ಯ ವಿವಾಹವಾಗಿದ್ದ ಐಶ್ವರ್ಯ, ಈಗ ಕ್ಷುಲ್ಲಕ ಕಾರಣಕ್ಕೆ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ತಂಗಿಯ ಹುಟ್ಟುಹಬ್ಬಕ್ಕೆ ಕರೆದುಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂಗಿಯ ಬರ್ತ್ ಡೇಗೆ ಕರೆದುಕೊಂಡು ಹೋಗುವಂತೆ ಐಶ್ವರ್ಯ ಪತಿಯನ್ನು ಕೇಳಿದ್ದರು. ಆದರೆ ಪತಿ ಲಕ್ಷ್ಮೀನಾರಾಯಣ, ಈಗ ಹಣವಿಲ್ಲ, ಮುಂದಿನ ವರ್ಷಕರೆದುಕೊಂಡು ಹೋಗುತ್ತೇನೆ ಎಂದಿದ್ದಾರಂತೆ. ಇದರಿಂದ ಮನನೊಂದ ಐಶ್ವರ್ಯ, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
