HomeKarnatakaನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ; ಎಂಜಿನಿಯರ್ ಪತಿ, ಅತ್ತೆ-ಮಾವ ಪೊಲೀಸ್ ವಶಕ್ಕೆ

ನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ; ಎಂಜಿನಿಯರ್ ಪತಿ, ಅತ್ತೆ-ಮಾವ ಪೊಲೀಸ್ ವಶಕ್ಕೆ

ಕಲಬುರ್ಗಿ: ನವವಿವಾಹಿತೆ, ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರ್ಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.

ಅವರಾದ (ಬಿ) ಗ್ರಾಮದ ನವವಿವಾಹಿತೆ ರಂಜಿತಾ (25) ಮೃತ ಮಹಿಳೆ. ಮೃತ ರಂಜಿತಾ ಕುಟುಂಬದವರು ಪತಿ ಹಾಗೂ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪತಿ ಉಮೇಶ್ ಕಟ್ಟಿಮನಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಉಮೇಶ್ ಕಟ್ಟಿಮನಿ ನಿರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. 5 ತಿಂಗಳ ಹಿಂದಷ್ಟೇ ಉಮೇಶ್ ಹಾಗೂ ರಂಜಿತಾ ವಿವಾಹವಾಗಿತ್ತು. ಈಗ ರಂಜಿತಾ, ಪತಿ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದು ಕೊಲೆ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತಾ ಪತಿ ಉಮೇಶ್, ಅತ್ತೆ-ಮಾವ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular