ಬೆಂಗಳೂರು: ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಪೊಲೀಸರು ಕೂಡ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಹಾವನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಡಿಸೆಂಬರ್ 31ರಂದು ರಾತ್ರಿ 9 ಗಂಟೆಯಿಂದ ಬೆಂಗಳೂರು ನಗರದಲ್ಲಿ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾಗಲಿದೆ. ಸಂಚಾರ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಇಲ್ಲಿದೆ ಮಾಹಿತಿ.
ಎಂ.ಜಿ.ರಸ್ತೆ, ಕ್ವೀನ್ಸ್ ವೃತ್ತದ ಕಡೆಯಿಂದ ಪ್ರಯಾಣಿಸುವವರು ಹಲಸೂರಿನಿಂದ ಮುಂದಕ್ಕೆ ತೆರಳುವ ವಾಹನ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆಯಬೇಕು.
ಸೆಂಟ್ರಲ್ ಸ್ಟ್ರೀಟ್, ಬಿಆರ್ ವಿ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕವಾಗಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ.ರಸ್ತೆಗೆ ತೆರಳಬಹುದು.
ಹಲಸೂರುಕಡೆಯಿಂದ ಕಂಟೋನ್ಮೆಂಟ್ ಕಡೆಗೆ ತೆರಳಲು ಟ್ರಿನಿಟಿ ವೃತ್ತದಲ್ಲಿ ಬಲ ತಿರುವುವು ಪಡೆದುಕೊಂಡು ಹಲಸೂರು ರಸ್ತೆ ಡಿಕ್ಷನ್ಸನ್ ರಸ್ತೆ ಮೂಲಕ ಸಂಚರಿಸಿ ಕಬ್ಬನ್ ರಸ್ತೆ ಮೂಲಕವಾಗಿ ಮುಂದೆ ಸಾಗಲು ಅವಕಾಶ ಮಾಡಿಕೊಡಲಾಗುವುದು.
ಕಾಮರಾಜ್ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗ ಮಾಹಿತಿ ನೀಡಿದೆ.

