ಬೆಂಗಳೂರು : ಕನ್ನಡದ ‘ಬಿಗ್ ಬಾಸ್’ ಶೋ ಪುನಾರಂಭದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನ ರಿಲೀಸ್ ಮಾಡಿದೆ.
BBK12 is here to stay |ಎಂದಿನಂತೆ ಅದೇ ಸಮಯದಲ್ಲಿ ಎಂದು ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋ ಗೇಟ್ ಬೀಗ ತೆಗೆಯಲಾಗಿದೆ. ಮಧ್ಯರಾತ್ರಿ ಗೇಟ್ ಗೆ ಹಾಕಿದ್ದ ಬೀಗ ತೆಗೆಯಲಾಗಿದ್ದು, ‘ಬಿಗ್ ಬಾಸ್’ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.ಎರಡು ದಿನಗಳಿಂದ ಬಂದ್ ಆಗಿದ್ದ ‘ಬಿಗ್ ಬಾಸ್’ ಮನೆ ಬೀಗವನ್ನು ಮಧ್ಯರಾತ್ರಿ 2.42ಕ್ಕೆ ತೆಗೆಯುತ್ತಿದ್ದಂತೆ ಸ್ಪರ್ಧಿಗಳನ್ನು ಕರೆತರಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಸಿ ಗೇಟ್ ಓಪನ್ ಮಾಡಲಾಗಿದ್ದು, ಬಿಗ್ ಬಾಸ್ ಕೆಲಸಗಳಿಗೆ ಗೇಟ್ ಓಪನ್ ಮಾಡಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಡಿಸಿ ಯಶವಂತ ಗುರುಕರ್ ತಿಳಿಸಿದ್ದಾರೆ.
#BBK12 is here to stay🔥 | ಎಂದಿನಂತೆ ಅದೇ ಸಮಯದಲ್ಲಿ…
— Colors Kannada (@ColorsKannada) October 9, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo @KicchaSudeep pic.twitter.com/d8aoAPmVbH