HomeLatest NewsBIG NEWS : ಕರ್ನಾಟಕದಲ್ಲಿ ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ : ಈ ನಿಯಮಗಳ...

BIG NEWS : ಕರ್ನಾಟಕದಲ್ಲಿ ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

ಬೆಂಗಳೂರು : ಹೊಸ ವರ್ಷಾಚರಣೆಗೆ ಜನರು ಸಜ್ಜಾಗಿದ್ದಾರೆ. ಹೊಸ ವರ್ಷ 2026 ವೆಲ್ ಕಮ್ ಗೆ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಕೂಡ ಅಲರ್ಟ್ ಆಗಿದ್ದು, ಮಾರ್ಗಸೂಚಿ ಪ್ರಕಟಿಸಿದ್ದಾರೆ. ಈ ಸಂಬಂಧ ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಕರ್ನಾಟಕ ಐಜಿ & ಡಿಜಿಪಿ ಡಾ. ಸಲೀಂ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮಾರ್ಗಸೂಚಿಗಳು ಹೀಗಿದೆ.

ಹೊಸ ವರ್ಷದ ಸಂಭ್ರಮಾಚರಣೆಯು ಮದ್ಯಪಾನದ ಪರಿಣಾಮವಾಗಿ ಜನಸಮೂಹದ ಮನಸ್ಥಿತಿಯು ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಮದ್ಯಪಾನವು ಜನರ ವಿವೇಕಶಕ್ತಿಯನ್ನು ದುರ್ಬಲಗೊಳಿಸುತ್ತದೆ ಹಾಗೂ ಸಂಕೋಚತಾ/ಹಿಂಜರಿಕಾ ಮನೋಭಾವವನ್ನು ಮೀರುವಂತೆ ಮಾಡುತ್ತದೆ. ಕೌಂಟ್ಡೌನ್ಗಳು ಮತ್ತು ಸಂಭ್ರಮದ ಕ್ಷಣಗಳಿಂದ ಉಂಟಾಗುವ ಉಲ್ಲಾಸವು ಜನಸಮೂಹದಲ್ಲಿ ಸಾಮೂಹಿಕ ಪ್ರೇರೇಪಣೆಯನ್ನು ಸೃಷ್ಟಿಸಿ, ದಟ್ಟ ಗುಂಪಿನೊಳಗಿರುವ ಕಾರಣ ಯಾವ ನಡೆಗೂ ಅಪಾಯವಿಲ್ಲವೆಂಬ ತಪ್ಪು ಕಲ್ಪನೆಯನ್ನು ಉಂಟುಮಾಡುತ್ತದೆ. ವೇದಿಕೆಗಳಲ್ಲಿ ಜನಸ್ತೋಮದ ಹರಿವು ಅಥವಾ ಪಟಾಕಿ ಸಿಡಿಸುವಂತಹ ಪ್ರದರ್ಶನಗಳು ಮುಂತಾದ ಹಲವು ಕಾರಣಗಳಿಂದಾಗಿ ಅಪ್ರಜ್ಞಾತ್ಮಕ ವರ್ತನೆಗಳು ಕಂಡುಬರುತ್ತವೆ. ಜನಸಮೂಹದ ಹರಿವನ್ನು ಒಮ್ಮೆಲೇ ಪ್ರೇರೇಪಿಸಿ ಅಪಾಯಕರ ಅಲೆಗಳಂತೆ ರೂಪುಗೊಳ್ಳಬಹುದಾದಂತಹ ಸಂಗೀತದ ತೀವ್ರತೆಯ ಘಟನಾವಳಿಗಳನ್ನು ಪೊಲೀಸ್ ಅಧಿಕಾರಿಗಳು ಗಮನಿಸಬೇಕಿದೆ. ಪಟಾಕಿ ಸಿಡಿಯುವಲ್ಲಿ ವಿಳಂಬವಾದರೆ ನಿರಾಶೆ ಉಂಟಾಗಿ, ಜನಸಮೂಹದ ಸಂಭ್ರಮವು ತಕ್ಷಣವೇ ಅಸಹನೆ ಮತ್ತು ಕೋಪಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಗುಂಪಿನಲ್ಲಿ ವದಂತಿಗಳು ವೇಗವಾಗಿ ಹರಡಿ, ಅಪಾಯದ ಭ್ರಮೆಯು ಆತಂಕವನ್ನು ಹೆಚ್ಚಿಸುತ್ತದೆ. ಜನಸ್ತೋಮದ ಗುಂಪು ತಮ್ಮ ಸುತ್ತಮುತ್ತಲ ವ್ಯಕ್ತಿಗಳ ವರ್ತನೆಯನ್ನು ಅನುಸರಿಸುವುದರಿಂದ ವ್ಯಕ್ತಿಗತ ನಿಯಂತ್ರಣ ಕಷ್ಟಸಾಧ್ಯವಾಗುತ್ತದೆ.

ಹೊಸ ವರ್ಷಾಚರಣೆಗಾಗಿ ಇಳಿಜಾರು ಮೇಲೆ ಅಥವಾ ಜಾರುವ ಸ್ಥಳಗಳು, ಮೆಟ್ಟಿಲುಗಳಿಂದ ಕೂಡಿದ ಸ್ಥಳಗಳಲ್ಲಿ ಸೇರುವ ಜನಸ್ತೋಮಕ್ಕೆ ಇನ್ನಷ್ಟು ಅಪಾಯಗಳಿರುತ್ತವೆ. ಮಾಲ್ಗಳಂತಹ ಕಟ್ಟಡದೊಳಗಿಂದ, ಉಷ್ಣತೆ ಮತ್ತು ಶಬ್ದ ಹೊರಹೋಗದಂತಹ ವಾತಾವರಣದ ಹಿನ್ನೆಲೆಯಲ್ಲಿ ಈ ಸ್ಥಳಗಳಲ್ಲಿ ಭಾವನಾತ್ಮಕ ಅಸ್ಥಿರತೆ ಹೆಚ್ಚಿರುತ್ತದೆ. ಮದ್ಯಪಾನದಿಂದ ಉಂಟಾಗುವ ಆಕ್ರಮಣಶೀಲತೆಗಳಂತಹವರ್ತನೆಗಳು, ಸಾಮಾನ್ಯವಾಗಿ ಮದ್ಯಮಾರಾಟ ಸ್ಥಳಗಳ ಬಳಿ ಚುಡಾಯಿಕೆ (ಈವ್-ಟೀಸಿಂಗ್) ಅಥವಾ ಜಗಳಗಳ ರೂಪದಲ್ಲಿ ಕಂಡುಬರುತ್ತವೆ. ದಟ್ಟವಾದ ಜನರ ಗುಂಪುಗಳಲ್ಲಿ ವೈಯಕ್ತಿಕ ಅಂತರ ಕುಗ್ಗುವುದರಿಂದ ಘರ್ಷಣೆ ಹೊಡೆದಾಟಗಳು ಉಂಟಾಗುತ್ತವೆ. ಕೌಂಟ್ಡೌನ್ ಘೋಷಣೆಗಳು ಗುಂಪನ್ನು ಏಕೀಕರಿಸಿ, ಸಂಘರ್ಷಗಳನ್ನು ಒಮ್ಮೆಲೇ ಚಿಮ್ಮುವವರೆಗೆ ಮುಚ್ಚಿಡುತ್ತವೆ. ಆದರೆ ಅವು ಏಕಾಏಕಿ ಸ್ಫೋಟಗೊಳ್ಳುತ್ತವೆ. ನಿರ್ಗಮನ ದ್ವಾರಗಳ ಬಳಿ ಕಂಡುಬರುವಂತಹ ಬಾಟಲ್ನೆಕ್ ಮೇಲೆ ಅಧಿಕಾರಿಗಳು ತೀವ್ರ ನಿಗಾ ವಹಿಸುವುದು ಸೂಕ್ತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಂಪಿನಲ್ಲಿರುವ ವ್ಯಕ್ತಿಗಳು ಬೇಜವಾಬ್ದಾರಿ ಮತ್ತು ಧ್ವಂಸಕೃತ್ಯ ಅಥವಾ ಅಶಿಸ್ತಿನ ವರ್ತನೆಗೆ ಕಾರಣವಾಗುತ್ತವೆ. ತಡರಾತ್ರಿಯ ದಣಿವು ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸುತ್ತದೆ. ಸಾಮಾಜಿಕ ಮಾಧ್ಯಮಗಳ ಹೈಪ್ ಅತಿರೇಕದ ನಿರೀಕ್ಷೆಗಳ ನಿರೀಕ್ಷೆಯು ಹುಸಿಯಾಗಿ, ನಿರಾಶೆಯಿಂದ ಒತ್ತಡವನ್ನು ಹೆಚ್ಚಿಸಬಹುದು. ಇಂತಹ ಸಮಯದಲ್ಲಿ ಪೊಲೀಸರ ಗೋಚರತೆಯು ಜನರಲ್ಲಿ ಭರವಸೆ ಮೂಡಿಸಿ, ಗುಂಪಿನ ಅತಿರೇಕವನ್ನು ತಡೆಯುತ್ತದೆ. ಪೊಲೀಸರ ಮಧ್ಯಪ್ರವೇಶದಿಂದ ಘಟನೆಗಳು ಬೃಹದಾಕಾರವಾಗುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ. ಪೊಲೀಸರ ಸ್ವಯಂಪ್ರೇರಿತ ಕ್ರಮಗಳು ಶಾಂತಿ, ಸುರಕ್ಷತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಹಕಾರ ನೀಡುತ್ತವೆ.

ಮೇಲ್ಕಂಡ ಹಲವಾರು ಕಾರಣಗಳಿಂದಾಗಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯಾವುದೇ ಅವಘಡಗಳನ್ನು ತಡೆಯಲು, ಸಾರ್ವಜನಿಕ ಶಾಂತಿ ಕಾಪಾಡಲು ಹಾಗೂ ರಾಜ್ಯದಾದ್ಯಂತ ಸುರಕ್ಷಿತ ಆಚರಣೆಗಳನ್ನು ಖಚಿತಪಡಿಸಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೆಳಕಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಈ ಕೆಳಕಾಣಿಸಿದ ನಿರ್ದೇಶನಗಳನ್ನು ಹೊರಡಿಸಲಾಗಿದೆ.

  1. ಸಂಭ್ರಮಾಚರಣೆ ಹಾಟ್ ಸ್ಪಾಟ್ಗಳು, ಬೀಚ್ಗಳು, ಮಾಲ್ಗಳು, ಬಾರ್ಗಳು ಮತ್ತು ಹೆದ್ದಾರಿಗಳನ್ನು ಒಳಗೊಂಡು ಅಪಾಯಕಾರಿಯಾದ ಪ್ರದೇಶಗಳಲ್ಲಿ ಸಾಕಾಗುವಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುವುದು.
  2. ವಾಹನಗಳ ನಿರಂತರ ಗಸ್ತು, ಪೊಲೀಸರ ಕಾಲ್ನಡಿಗೆ ಗಸ್ತು, ಬೈಕ್ ಗಳ ಗಸ್ತು ಹಾಗೂ ಅಶ್ವಾರೋಹಿ ಗಸ್ತುಗಳು ಸಾರ್ವಜನಿಕರಲ್ಲಿ ಪೊಲೀಸರ ಗೋಚರತೆಯನ್ನು ಹೆಚ್ಚಿಸುತ್ತದೆ ಹಾಗೂ ತುರ್ತು ಪ್ರತಿಕ್ರಿಯೆ ಸಾಧ್ಯವಾಗಿಸುತ್ತದೆ.
  3. ಪೂರ್ವಯೋಜಿತ ಸ್ಥಳಗಳಲ್ಲಿ ಟ್ರಾಫಿಕ್ ಮತ್ತು ಎಸ್.ಡಬ್ಲೂ.ಎ.ಟಿ ತಂಡಗಳನ್ನು ಒಳಗೊಂಡಂತೆ ಎಲ್ಲಾ ಘಟಕಗಳನ್ನು ನಿಯೋಜಿಸಿಕೊಳ್ಳುವುದು వాగ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ವೀಡಿಯೋಗ್ರಾಫಿ ಮಾಡಿಸುವುದು.
  4. ಪ್ರಮುಖ ಕಾರ್ಯಕ್ರಮ ಸ್ಥಳಗಳು ಮತ್ತು ಹೆದ್ದಾರಿಗಳ ಪ್ರವೇಶ/ನಿರ್ಗಮನ ದ್ವಾರಗಳಲ್ಲಿ “ಡಬ್ಲೂ” ಮಾದರಿಯ ಬ್ಯಾರಿಕೇಡ್ಗಳು, ಪ್ರತಿಫಲಕ ಸೂಚನಾ ಫಲಕಗಳು ಮತ್ತು ಬ್ರೆತ್ ಕಾರ್ಯಕ್ರಮಕ್ಕೂ ಮುನ್ನ ಅಪಾಯ ಮೌಲ್ಯಮಾಪನ, ಮಾಕ್ ಡ್ರಿಲ್ಗಳು ಮತ್ತು ಬ್ರಿಫಿಂಗ್ಗಳನ್ನು ನಡೆಸಿ ಸಿಬ್ಬಂದಿಗೆ ಪ್ರತಿಕ್ರಿಯಾ ಕ್ರಮಗಳ ಬಗ್ಗೆ ಸ್ಪಷ್ಟತೆ ನೀಡುವುದು. ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರವಾಗುವಂತಹ ರೀತಿಯಲ್ಲಿ ಅಧಿಕಾರಿ / ಸಿಬ್ಬಂದಿಗಳನ್ನು ಸೂಕ್ತ ಹಾಗೂ ಸೂಕ್ಷ್ಮ ಸ್ಥಳಗಳಿಗೆ ನಿಯೋಜಿಸುವುದು.
  5. ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂರ್ಯಾಸ್ತದ ನಂತರ ಪ್ರತಿಫಲಕ ಜಾಕೆಟ್ಗಳನ್ನು ಕಡ್ಡಾಯವಾಗಿ ಧರಿಸುವುದು.
  6. ಹೆಚ್ಚಿನ ಪಾದಚಾರಿಗಳ ಸಂಚಾರ ನಿರೀಕ್ಷಿತ ಸ್ಥಳಗಳಲ್ಲಿ ಮಹಿಳಾ ಸುರಕ್ಷತಾ ದ್ವೀಪಗಳನ್ನು ಸ್ಥಾಪಿಸುವುದು ಹಾಗೂ ಅಗತ್ಯ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸುವುದು.
  7. ಜನಸಮೂಹದ ಮೇಲೆ ಪರಿಣಾಮಕಾರಿ ನಿಗಾವಹಣೆಗೆ ಎತ್ತರದ ವಾಚ್ ಟವರ್ಗಳನ್ನು ನಿರ್ಮಿಸುವುದು.
    ಈ ನಿರ್ದೇಶನಗಳು ಪರಿಪೂರ್ಣವಾದ ಕ್ರಮಗಳಾಗಿರುವುದಿಲ್ಲ, ಆದರೆ, ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಮೇಲ್ಕಂಡ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುವಂತೆ ಸೂಚಿಸಲಾಗಿದೆ. ಮೇಲ್ಕಂಡ ನಿರ್ದೇಶನಗಳ ಪಾಲನೆಯಲ್ಲಿ ಲೋಪದೋಷ/ನಿರ್ಲಕ್ಷತೆಗಳು ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular