ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ: ಮನಕಲಕುತ್ತೆ ಮಗಳನ್ನು ಕಳೆದುಕೊಂಡ ತಂದೆಯ ಕರುಣಾಜನಕ ಕಥೆ

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಕಾಲ್ತುಳಿತ ಸಂಭವಿಸಿದ ಕಾರಣ 18 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ತನ್ನ 7 ವರ್ಷದ ಮಗಳನ್ನು ಕಳೆದುಕೊಂಡ ತಂದೆಯೊಬ್ಬರು ಕರುಣಾಜನಕ ಕಥೆಯನ್ನು ಹಂಚಿಕೊಂಡಿದ್ದಾರೆ. ಶನಿವಾರದಂದು, ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಗ್‌ರಾಜ್ ಮಹಾಕುಂಭಕ್ಕೆ ಹೋಗಲು ಸಾವಿರಾರು ಜನರ ಗುಂಪು ಜಮಾಯಿಸಿತ್ತು. ರೈಲಿನಲ್ಲಿ ಹತ್ತಲು ಜನರ ನಡುವೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಯುಪಿಯ ಪ್ರಯಾಗ್‌ರಾಜ್‌ನಲ್ಲಿ ಫೆಬ್ರವರಿ 26 ರವರೆಗೆ ಮಹಾಕುಂಭವನ್ನು ಆಯೋಜಿಸಲಾಗಿದೆ.

ಮಗುವಿನ ತಂದೆ ಓಪಿಲ್ ಸಿಂಗ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಮಹಾಕುಂಭಕ್ಕೆ ಹೋಗಬೇಕಿತ್ತು. ಅವರು 14 ನೇ ಪ್ಲಾಟ್‌ಫಾರ್ಮ್‌ನಲ್ಲಿ ಇಳಿದಿದ್ದರು, ಅಲ್ಲಿ ಬಹಳಷ್ಟು ಜನಸಂದಣಿ ಇತ್ತು. “ಜನಸಂದಣಿ ಹೆಚ್ಚಾಗಿದೆ, ಮನೆಗೆ ಹೋಗೋಣ” ಎಂದು ಅವರು ಕುಟುಂಬಕ್ಕೆ ಹೇಳಿದ್ದರು.

“ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಲ್ಲಿ ಮಲಗಲು ಸಹ ಸ್ಥಳವಿಲ್ಲ, ಮಕ್ಕಳನ್ನು ಕರೆದುಕೊಂಡು ಹೋಗಿ ಏನು ಮಾಡುತ್ತೇವೆ?” ಎಂದು ಅವರು ಹೇಳಿದ್ದು, ಎನ್‌ಡಿಟಿವಿಯ ವರದಿಯ ಪ್ರಕಾರ, 45 ವರ್ಷದ ಓಪಿಲ್ ಸಿಂಗ್ ಅವರು ಪ್ರಯಾಗ್‌ರಾಜ್‌ಗೆ ಕನ್ಫರ್ಮ್ ಟಿಕೆಟ್ ಹೊಂದಿದ್ದರು. ಈ ವೇಳೆ, ಭಾರೀ ಜನಸಂದಣಿ ನಿಲ್ದಾಣದಲ್ಲಿ ರೈಲಿನಲ್ಲಿ ಹತ್ತಲು ಕಾಯುತ್ತಿತ್ತು. ಕೆಳಗೆ ಇಳಿಯುವಾಗ 6 ಮೆಟ್ಟಿಲುಗಳು ಮಾತ್ರ ಬಾಕಿ ಇದ್ದವು, ಇದ್ದಕ್ಕಿದ್ದಂತೆ ಕಾಲ್ತುಳಿತದ ನಡುವೆ ಮಗಳ ಕೈ ಅವರ ಕೈಯಿಂದ ಬಿಟ್ಟು ಹೋಯಿತು.

ಕನಿಷ್ಠ 5-6 ಸಾವಿರ ಜನರು ಒಟ್ಟಿಗೆ ಕೆಳಗೆ ಇಳಿಯುತ್ತಿದ್ದರು, ಒಬ್ಬರ ನಂತರ ಒಬ್ಬರು ಮೇಲೆ ಬೀಳುತ್ತಿದ್ದರು, ಯಾರಿಗೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ನನ್ನ ಕಣ್ಣೆದುರೇ 7 ವರ್ಷದ ಮಗಳು ರಿಯಾ ತಲೆಗೆ ರಾಡ್ ಹೊಕ್ಕಿತು. ಅವಳ ಇಡೀ ದೇಹ ರಕ್ತಮಯವಾಯಿತು, ನನ್ನ ಕಣ್ಣೆದುರೇ ಮಗಳು ಪ್ರಾಣ ಬಿಟ್ಟಳು ಎಂದು ಕಣ್ಣೀರಿಟ್ಟಿದ್ದಾರೆ.

ಮಗಳನ್ನು ಉಳಿಸಲು ಅವರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಯಾವುದೇ ಆಂಬ್ಯುಲೆನ್ಸ್ ಸಹ ಸಿಗಲಿಲ್ಲ. ರೈಲ್ವೆ ಇಲಾಖೆಯಿಂದ ಯಾವುದೇ ವ್ಯವಸ್ಥೆ ಮಾಡಲಾಗಿರಲಿಲ್ಲ. ಅಪಘಾತದ ನಂತರ ಯಾರೋ ಅವರ ಮೊಬೈಲ್ ಮತ್ತು ಪರ್ಸ್ ಕದ್ದಿದ್ದಾರೆ. ಇದರ ಮಧ್ಯೆ ಇಬ್ಬರು ಕೂಲಿಗಳು 100-100 ರೂಪಾಯಿ ನೀಡಿ ಸಹಾಯ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read