ಚಾಮರಾಜನಗರ: ನವಜಾತ ಶಿಶುವನ್ನು ಪಂಚೆಯಲ್ಲಿ ಸುತ್ತಿ ರಸ್ತೆಬದಿ ಬಿಟ್ಟು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಾಗಡೆ ಹಾಗೂ ತಮ್ಮಡಹಳ್ಳಿ ಮಾರ್ಗದಲ್ಲಿ ನಡೆದಿದೆ.
ರಸ್ತೆಬದಿಯಲ್ಲಿ 10-15 ದಿನಗಳ ಹೆಣ್ಣುಶಿಶು ಪತ್ತೆಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದಾಗ ಪರಮೇಶ್ ಎಂಬುವವರಿಗೆ ರಸ್ತೆಬದಿ ಪಂಚೆಯಲ್ಲಿ ಸುತ್ತಿಟ್ಟ ರೀತಿಯಲ್ಲಿ ಮಗು ಕಂಡಿದೆ. ತಕ್ಷಣ ಕಂದಮ್ಮನನ್ನು ರಕ್ಷಿಸಿ ಸಾಗಾಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಎಂಬುವವರ ಸಹಾಯದಿಂದ ಚಾಮರಾಜನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ ತೀವ್ರ ನಿಗಾಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.