ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಬೇಡಿ

 

ದೈನಂದಿನ ಜೀವನದಲ್ಲಿ ಅನೇಕ ವಸ್ತುಗಳನ್ನು ನಾವು ಬಳಸ್ತೇವೆ. ಇದು ನಮ್ಮ ಜೀವನದ ಮೇಲೆ ಕೆಟ್ಟ ಹಾಗೂ ಒಳ್ಳೆ ಎರಡೂ ಪರಿಣಾಮವನ್ನು ಬೀರುತ್ತವೆ. ಬಹುತೇಕರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ವಸ್ತುಗಳನ್ನು ಬಳಕೆ ಮಾಡ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆಯವರ ಕೆಲವೊಂದು ವಸ್ತುಗಳನ್ನು ಬಳಸುವುದು ಅಶುಭ. ಇದು ನಮ್ಮ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಲಿನಲ್ಲಿ ಶನಿ ವಾಸವಾಗಿರುತ್ತಾನೆ. ಹಾಗಾಗಿ ಚಪ್ಪಲಿ-ಶೂ ಶನಿಗೆ ಸಂಬಂಧಿಸಿದ್ದಾಗಿರುತ್ತದೆ. ಬೇರೆಯವರ ಚಪ್ಪಲಿಯನ್ನು ಪದೇ ಪದೇ ಬಳಕೆ ಮಾಡಿದ್ರೆ ಜಾತಕದಲ್ಲಿ ಶನಿ ಕೆಟ್ಟ ಪ್ರಭಾವ ಬೀರುತ್ತಾನೆ.

ಬಹುತೇಕರು ಬೇರೆಯವರ ಟವೆಲ್ ಬಳಸ್ತಾರೆ. ವಾಸ್ತು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಬೇರೆಯವರ ಟವೆಲ್ ಬಳಕೆಯಿಂದ ಅವರ ನಕಾರಾತ್ಮಕ ಪ್ರಭಾವಕ್ಕೆ ನಾವು ಒಳಗಾಗ್ತೇವೆ. ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಯಿದ್ದರೆ ಅದು ಟವೆಲ್ ಬಳಸಿದ ವ್ಯಕ್ತಿಗೆ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ.

ಮನೆಯಿಂದ ಹೊರಗೆ ಹೋದಾಗ ಬಹುತೇಕರು ಬೇರೆಯವರ ಎಣ್ಣೆಯನ್ನು ತಲೆಗೆ ಹಾಕಿಕೊಳ್ತಾರೆ. ಎಣ್ಣೆ, ಶನಿಗೆ ಸಂಬಂಧಿಸಿದ್ದಾಗಿದೆ. ಬೇರೆಯವರ ಎಣ್ಣೆ ಬಳಕೆಯಿಂದ ಶನಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಕ್ಕೆ ಮಹತ್ವದ ಸ್ಥಾನವಿದೆ. ರತ್ನ ಧಾರಣೆಯಿಂದ ಗ್ರಹ ಸಂಬಂಧಿ ಸಮಸ್ಯೆ ದೂರವಾಗುತ್ತದೆ. ಆದ್ರೆ ತಪ್ಪು ರತ್ನ ಧಾರಣೆ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಬೇರೆಯವರ ರತ್ನವನ್ನು ಅಪ್ಪಿತಪ್ಪಿಯೂ ಬಳಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read