ಎಂದೂ ಈ ಸಮಸ್ಯೆಯನ್ನು ನಿರ್ಲಕ್ಷ್ಯಿಸಬೇಡಿ

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಪುರುಷರಿಗಿಂತ ಮಹಿಳೆಯಲ್ಲಿ ಸಮಸ್ಯೆ ಉಲ್ಬಣಿಸಿದೆ. ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗ್ತಿದೆ. ಥೈರಾಯ್ಡ್ ಒಂದು ರೀತಿಯ ಗ್ರಂಥಿಯಾಗಿದ್ದು, ಅದು ಕುತ್ತಿಗೆಯ ಮುಂಭಾಗದಲ್ಲಿದೆ. ಈ ಗ್ರಂಥಿ, ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಆರಂಭಿಕ ಲಕ್ಷಣಗಳನ್ನು ತಿಳಿದು ತಕ್ಷಣ ಚಿಕಿತ್ಸೆ ಶುರು ಮಾಡಿದಲ್ಲಿ ಇದನ್ನು ನಿಯಂತ್ರಿಸಬಹುದು.

ಸುಸ್ತು : ಥೈರಾಯ್ಡ್ ನ ಸಾಮಾನ್ಯ ಲಕ್ಷಣವೆಂದರೆ ಸುಸ್ತು. ಥೈರಾಯ್ಡ್ ಹಾರ್ಮೋನ್ ಶಕ್ತಿಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಹೆಚ್ಚು ಸುಸ್ತಾಗಲು ಪ್ರಾರಂಭವಾಗುತ್ತದೆ.

ತ್ವರಿತ ತೂಕ ಹೆಚ್ಚಳ : ಯಾವುದೇ ಕಾರಣವಿಲ್ಲದೆ ತೂಕ, ವೇಗವಾಗಿ ಹೆಚ್ಚಾಗಲು ಶುರುವಾಗುತ್ತದೆ. ಇದು ಥೈರಾಯ್ಡ್‌ ಸಂಕೇತವಾಗಿದೆ. ಥೈರಾಯ್ಡ್ ಮಟ್ಟ ಕಡಿಮೆಯಾದಾಗ ಚಯಾಪಚಯ ಸರಿಯಾಗುವುದಿಲ್ಲ. ಇದರಿಂದಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಸ್ನಾಯು, ಕೀಲುಗಳ ನೋವು : ಥೈರಾಯ್ಡ್ ಶುರುವಾದಾಗ ಸ್ನಾಯುವಿನ ಬಲ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚು ದೌರ್ಬಲ್ಯ ಮತ್ತು ನೋವು ಕಾಣಿಸಿಕೊಳ್ಳುತ್ತದೆ.

ಕೂದಲು ಉದುರುವಿಕೆ : ಯಾವುದೇ ಕಾರಣವಿಲ್ಲದೆ  ಕೂದಲು ವೇಗವಾಗಿ ಉದುರುತ್ತಿದ್ದರೆ, ಇದು ಥೈರಾಯ್ಡ್ ನ ಲಕ್ಷಣವೂ ಆಗಿರಬಹುದು. ಒಂದು ಅಧ್ಯಯನದ ಪ್ರಕಾರ, ಥೈರಾಯ್ಡ್ ನಿಂದಾಗಿ ಥೈರಾಯ್ಡ್ ಹಾರ್ಮೋನುಗಳು ಕಡಿಮೆಯಾಗುತ್ತವೆ. ಇದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.

ಹೆಚ್ಚು ಒತ್ತಡ: ಥೈರಾಯ್ಡ್ ನ ಲಕ್ಷಣಗಳಲ್ಲಿ ಒತ್ತಡವೂ ಒಂದು. ಪುರುಷರಿಗಿಂತ ಮಹಿಳೆಯರು ಒತ್ತಡದ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ.

ಥೈರಾಯ್ಡ್ ಗೆ ಅಯೋಡಿನ್ ಕೊರತೆ, ಆನುವಂಶಿಕ, ವಿಕಿರಣ ಚಿಕಿತ್ಸೆ, ಉದ್ವೇಗ, ಅತಿಯಾದ ಔಷಧ ಬಳಕೆ, ಮೊನೊಪಾಸ್, ಗರ್ಭಧಾರಣೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read