‘ಮೊಟ್ಟೆ’ ಜೊತೆ ಈ ಆಹಾರ ಸೇವಿಸಲೇಬೇಡಿ….!

ಮೊಟ್ಟೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದ್ರಲ್ಲಿ  ಹಲವಾರು ರೀತಿಯ ಪೋಷಕಾಂಶಗಳಿವೆ. ಪ್ರೋಟೀನ್ ಸಮೃದ್ಧವಾಗಿರುವ ಮೊಟ್ಟೆ ಸ್ನಾಯುಗಳಿಗೆ ಪರಿಣಾಮಕಾರಿ. ಮೊಟ್ಟೆ ತಿನ್ನುವುದರಿಂದ ಹೃದಯದಿಂದ ಹಿಡಿದು ನಮ್ಮ ದೇಹದ ಎಲ್ಲ ಭಾಗಕ್ಕೂ ಪ್ರಯೋಜನವಿದೆ. ಬೆಳಿಗ್ಗೆ ಉಪಹಾರಕ್ಕೆ ಮೊಟ್ಟೆ ಅತ್ಯುತ್ತಮ ಆಹಾರ. ಅದನ್ನು ನೀವು ಬೇಯಿಸಿ, ಆಮ್ಲೆಟ್‌ ಮಾಡಿ ಸೇವನೆ ಮಾಡಬಹುದು.

ಪ್ರತಿ ದಿನ ಮೊಟ್ಟೆ ಸೇವನೆ ಮಾಡುವವರು ಮೊಟ್ಟೆಯನ್ನು ಹೇಗೆ ತಿನ್ನಬೇಕು ಎಂಬುದನ್ನು ತಿಳಿದಿರಬೇಕು. ಕೆಲವೊಮ್ಮೆ ನಾವು ಮೊಟ್ಟೆ ಜೊತೆ ಸೇವಿಸುವ ಬೇರೆ ಆಹಾರಗಳು ನಮ್ಮ ಆರೋಗ್ಯವನ್ನು ಹದಗೆಡಿಸುತ್ತವೆ. ನೀವು ಎಲ್ಲ ಆಹಾರ ಪದಾರ್ಥದ ಜೊತೆ ಮೊಟ್ಟೆ ತಿನ್ನುವುದು ಸೂಕ್ತವಲ್ಲ.

ನೀವು ಪ್ರೈ ಮಾಡಿದ ಮಾಂಸದ ಜೊತೆ ಯಾವುದೇ ಕಾರಣಕ್ಕೂ ಮೊಟ್ಟೆ ಸೇವನೆ ಮಾಡಬೇಡಿ. ಎರಡರಲ್ಲೂ ಸಾಕಷ್ಟು ಕೊಬ್ಬು ಮತ್ತು ಪ್ರೋಟೀನ್ ಇರುತ್ತದೆ. ಇದು ನಿಮ್ಮ ದೇಹದಲ್ಲಿ ಸೋಮಾರಿತನವನ್ನು ಹೆಚ್ಚಿಸುತ್ತದೆ.

ಇದೇ ರೀತಿ ನೀವು ಸಕ್ಕರೆ ಜೊತೆ ಮೊಟ್ಟೆ ತಿನ್ನಬೇಡಿ. ಇವೆರಡನ್ನು ಒಟ್ಟಿಗೆ ಬೇಯಿಸಿದರೆ ಅಮೈನೋ ಆಮ್ಲ  ಬಿಡುಗಡೆಯಾಗುತ್ತವೆ. ಇದು   ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೆ ಕಾರಣವಾಗುತ್ತದೆ.

ಮೊಟ್ಟೆ ಹಾಗೂ ಸೋಯಾ ಮಿಲ್ಕ್‌ ಕಾಂಬಿನೇಷನ್‌ ಕೂಡ ಒಳ್ಳೆಯದಲ್ಲ. ಫಿಟ್ನೆಸ್‌ ಗೆ ಹೆಚ್ಚು ಆದ್ಯತೆ ನೀಡುವ ಜನರು ಈ ಎರಡನ್ನೂ ಒಟ್ಟಿಗೆ ತಿನ್ನುತ್ತಾರೆ. ಆದ್ರೆ ಇವೆರಡ ಕಾಂಬಿನೇಷನ್‌ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

ಬೀನ್ಸ್, ಚೀಸ್, ಹಾಲಿನ ಉತ್ಪನ್ನಗಳ ಜೊತೆಗೂ ನೀವು ಮೊಟ್ಟೆ ತಿನ್ನಬೇಡಿ. ಟೀ ಅಥವಾ ಕಾಫಿ ಕುಡಿಯುವ ವೇಳೆಯೂ ಮೊಟ್ಟೆ ತಿನ್ನೋದು ಯೋಗ್ಯವಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read