ಮದುವೆಯಾಗು ಎಂದಿದ್ದಕ್ಕೆ ಯುವತಿಯನ್ನೇ ಹತ್ಯೆಗೈದ ಸೇನಾಧಿಕಾರಿ…!

ಡೆಹ್ರಾಡೂನ್: ಸೇನಾಧಿಕಾರಿಯೊಬ್ಬರು ಯುವತಿಯನ್ನೇ ಹತ್ಯೆಗೈದ ಘೋರ ಘಟನೆ ಬೆಳಕಿಗೆ ಬಂದಿದೆ. ಯುವತಿ  ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಕ್ಕೆ ಆಕೆಯನ್ನೇ ಸೇನಾಧಿಕಾರಿ ಕೊಲೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಸೇನೆಯ ಲೆಫ್ಟಿನೆಂಟ್ ಕರ್ನಲ್ ನನ್ನು ಬಂಧಿಸಲಾಗಿದೆ. ಉತ್ತರಾಖಂಡದ ಸಿರ್ವಾಲ್ ಗಢ ಪ್ರದೇಶದಲ್ಲಿ ನೆಪಾಳಿ ಯುವತಿಯೊಬ್ಬರ ಶವ ಪತ್ತೆಯಾಗಿತ್ತು. ಆಕೆ ಸಿಲಿಗುರಿಯಲ್ಲಿ ವಾಸವಾಗಿದ್ದಳು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೇನಾಧಿಕಾರಿ ರಾಮೇಂಧು ಉಪಾಧ್ಯಾಯ ಎಂಬುವವರನ್ನು ಬಂಧಿಸಿದ್ದಾರೆ.

ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಸೇನಾಧಿಕಾರಿ ರಾಮೇಂದು ಉಪಾಧ್ಯಾಯ, ಶ್ರೇಯಾ ಶರ್ಮಾ ಎಂಬ ಯುವತಿ  ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಯುವತಿ  ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಳು. ಇದೇ ಕಾರಣಕ್ಕೆ ಯುವತಿಯನ್ನೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಯನ್ನು ಪಂಡಿತ್ವಾರಿ ಪ್ರೇಮ್ ನಗರದ ಅವರ ಮನೆಯಿಂದ ಬಂಧಿಸಲಾಗಿದೆ. ಸಿಲಿಗುರಿಯ ಡಾನ್ಸ್ ಬಾರ್ ಒಂದರಲ್ಲಿ ಶ್ರೇಯಾ ಶರ್ಮಾ ಆರೋಪಿಯನ್ನು ಭೇಟಿಯಾಗಿದ್ದಳು. ಮೂರು ವರ್ಷಗಳಿಂದ ಇಬ್ಬರ ನಡುವೆ ಸಂಬಂಧವಿತ್ತಲ್ಲದೇ ಡೆಹ್ರಾಡೂನ್ ಗೆ ರಾಮೇಂಧು ವರ್ಗಾವಣೆಯಾದಾಗ, ಶ್ರೇಯಾಳನ್ನು ತನ್ನೊಂದಿಗೆ ಡೆಹ್ರಾಡೂನ್ ಗೆ ಕರೆದೊಯ್ದು ಬಾಡಿಗೆ ಮನೆಯಲ್ಲಿ ಇರಿಸಿದ್ದ. ಇತ್ತೀಚೆಗೆ ಶ್ರೇಯಾ ವಿವಾಹವಾಗುವಂತೆ ಒತ್ತಡ ಹೇರಿದ್ದಳು. ಶನಿವಾರ ರಾತ್ರಿ ಶ್ರೇಯಾಳೊಂದಿಗೆ ಕ್ಲಬ್ ನಲ್ಲಿ ಕಂಠಪೂರ್ತಿ ಕುಡಿದು ಬಳಿಕ ಲಾಂಗ್ ಡ್ರೈವ್ ಹೋಗೋಣ ಎಂದು ಕರೆದೊಯ್ದಿದ್ದ. ಬಳಿಕ ಮಧ್ಯರಾತ್ರಿ 1:30ರ ಸುಮಾರಿಗೆ ಥಾನೋ ರಸ್ತೆಯ ಬಳಿ ಕಾರು ನಿಲ್ಲಿಸಿ ಯುವತಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ.

ಬಳಿಕ ಶವವನ್ನು ರಸ್ತೆ ಬದಿ ಎಸೆದು ಹೋಗಿದ್ದ. ಸೇನಾಧಿಕಾರಿಗೆ ಅದಾಗಲೇ ಒಂದು ವಿವಾಹವಾಗಿತ್ತು. ಶ್ರೇಯಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಪದೇ ಪದೇ ವಿವಾಹವಾಗುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಶ್ರೇಯಾಳನ್ನೇ ಹತ್ಯೆಗೈದಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read