ಮನೆಯಲ್ಲೇ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನೇಪಾಳ ಸಂಸದರ ತಾಯಿ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಸಂಸದ ಚಂದ್ರ ಭಂಡಾರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ರವಾನಿಸಲಾಗುತ್ತದೆ.
ಇಂದು ಬೆಳಿಗ್ಗೆ ಸಂಸದ ಚಂದ್ರ ಭಂಡಾರಿ ಅವರ ತಾಯಿ ಹರಿಕಲಾ ಭಂಡಾರಿ ಸಾವಿಗೀಡಾಗಿದ್ದು, ಶೇಕಡ 25ರಷ್ಟು ಸುಟ್ಟ ಗಾಯಗಳಾಗಿರುವ ಚಂದ್ರ ಭಂಡಾರಿ ಅವರನ್ನು ನವಿ ಮುಂಬೈನಲ್ಲಿರುವ ರಾಷ್ಟ್ರೀಯ ಸುಟ್ಟಗಾಯಗಳ ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಈ ಮೊದಲು ನೇಪಾಳದ ಕೀರ್ತಿಪುರ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಗಿತ್ತಾದರೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಕಾರಣ ವೈದ್ಯರ ಶಿಫಾರಸ್ಸಿನ ಮೇರೆಗೆ ಮುಂಬೈಗೆ ಕಳುಹಿಸಲಾಗುತ್ತಿದೆ.
https://twitter.com/ANI/status/1626076431808880640?ref_src=twsrc%5Etfw%7Ctwcamp%5Etweetembed%7Ctwterm%5E1626091585992785922%7Ctwgr%5E5e4ecc417bff86c9ba69be0f6044cf82a8bafd8d%7Ctwcon%5Es2_&ref_url=https%3A%2F%2Fwww.freepressjournal.in%2Fworld%2Fnepal-mps-mother-dies-from-burns-after-an-lpg-cylinder-explosion-minister-to-be-flown-to-mumbai-for-treatment
https://twitter.com/ANI/status/1626076431808880640?ref_src=twsrc%5Etfw%7Ctwcamp%5Etweetembed%7Ctwterm%5E1626076431