HomeIndiaBREAKING: ನೀಟ್ ಪರೀಕ್ಷಾ ಅಕ್ರಮ: ಭಾರತದಲ್ಲಿ ಟೆಲಿಗ್ರಾಂ ಆಪ್ ಗೆ ನಿರ್ಬಂಧ

BREAKING: ನೀಟ್ ಪರೀಕ್ಷಾ ಅಕ್ರಮ: ಭಾರತದಲ್ಲಿ ಟೆಲಿಗ್ರಾಂ ಆಪ್ ಗೆ ನಿರ್ಬಂಧ

ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಭಾರತದಲ್ಲಿ ಟೆಲಿಗ್ರಾಂ ಆಪ್ ನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

ಟೆಲಿಗ್ರಾಮ್ ಆಪ್ ಮೂಲಕವೇ ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಭಾರತದಲ್ಲಿ ಟೆಲಿಗ್ರಾಂ ಆಪ್ ಗೆ ನಿರ್ಬಂಧ ವಿಧಿಸಲಾಗಿದೆ. ನೀಟ್ ಪರೀಕ್ಷೆ ಮುಗಿಯುವವರೆಗೂ ಈ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜೂನ್ 22ವರೆಗೂ ಭಾರತದಲ್ಲಿ ಟೆಲಿಗ್ರಾಂ ಆಪ್ ಗೆ ನಿರ್ಬಂಧ ಹೇರಲಾಗಿದೆ. ಜೂನ್ 21 ರಂದು ನೀಟ್ ಮರುಪರೀಕ್ಷೆ ನಡೆಯಲಿದೆ. ಟೆಲಿಗ್ರಾಮ್ ಆಪ್ ಮೇಲಿನ ನಿಷೇಧ ಜೂನ್ 22ಕ್ಕೆ ಮುಗಿದರೂ, ಜೂನ್ 30ರವರೆಗೆ ಭಾರತದಲ್ಲಿ ಈ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ (Disable) ಟೆಲಿಗ್ರಾಮ್ ಸಂಸ್ಥೆಗೆ ಸರ್ಕಾರ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸರಿಸುಮಾರು 10 ಕೋಟಿಗೂ ಹೆಚ್ಚು ಮಂದಿ ಟೆಲಿಗ್ರಾಂ ಸಕ್ರಿಯ ಬಳಕೆದಾರರಿದ್ದಾರೆ. ಜಾಗತಿಕವಾಗಿ ಟೆಲಿಗ್ರಾಮ್ ಆಪ್ ಡೌನ್‌ಲೋಡ್ ಆಗುವ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 22 ರಷ್ಟು ಪಾಲು ಭಾರತದ್ದೇ ಆಗಿದೆ. ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ಶೇ. 39 ರಷ್ಟು ಜನರು ವಿವಿಧ ಅಗತ್ಯಗಳಿಗಾಗಿ ಟೆಲಿಗ್ರಾಮ್ ಅನ್ನು ಬಳಸುತ್ತಾರೆ.

ಈ ತಾತ್ಕಾಲಿಕ ನಿಷೇಧದಿಂದಾಗಿ ಸಾಮಾನ್ಯ ಬಳಕೆದಾರರಿಗೆ ಕೆಲವು ದಿನಗಳ ಕಾಲ ತೊಂದರೆಯಾಗಲಿದ್ದರೂ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷೆಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular