ಹಾಸ್ಟೆಲ್ ನಲ್ಲೇ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ಮೇಲೆ ಪದೇ ಪದೇ ಅತ್ಯಾಚಾರ; ಟಿಫಿನ್ ಬಾಯ್, ಮಾಲೀಕ ಅರೆಸ್ಟ್

ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ 15 ವರ್ಷದ ನೀಟ್ ಆಕಾಂಕ್ಷಿ ಮೇಲೆ ಪದೇ ಪದೇ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಫಿನ್ ಬಾಯ್ ಮತ್ತು ಕೋಚಿಂಗ್ ವಿದ್ಯಾರ್ಥಿಗಳ ಹಾಸ್ಟೆಲ್‌ನ ಮಾಲೀಕರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. .

ತನ್ನ ಸಹೋದರಿಯೊಂದಿಗೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಬಿಹಾರದ ಬಾಲಕಿ ಮಂಗಳವಾರ ನೀಡಿದ ದೂರಿನಲ್ಲಿ ಟಿಫಿನ್ ಹುಡುಗ ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ. ಆದರೆ, ಹಾಸ್ಟೆಲ್ ಮಾಲೀಕರು ಘಟನೆಯನ್ನು ಬಹಿರಂಗಪಡಿಸದಂತೆ ಎಚ್ಚರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಕೋಟಾ ನಗರ) ಶರದ್ ಚೌಧರಿ ಹೇಳಿದ್ದಾರೆ.

ವಿದ್ಯಾರ್ಥಿನಿ ತನ್ನ ದೂರಿನಲ್ಲಿ ಟಿಫಿನ್ ಬಾಯ್ ತನ್ನ ಕೋಣೆಗೆ ಆಹಾರ ತಲುಪಿಸಲು ಭೇಟಿ ನೀಡಿದ್ದು, ಆಕೆಯೊಂದಿಗೆ ಪರಿಚಯವಾಗಿದ್ದ. ಈ ಪರಿಚಯದ ಲಾಭವನ್ನು ಪಡೆದುಕೊಂಡು, ಫೆಬ್ರವರಿಯಲ್ಲಿ ಟಿಫಿನ್ ಹುಡುಗ ಅವಳನ್ನು ಮದ್ಯ ಕುಡಿಯುವಂತೆ ಪ್ರಚೋದಿಸಿದ. ಅವಳು ಅಮಲಿನಲ್ಲಿದ್ದಾಗ ಅತ್ಯಾಚಾರವೆಸಗಿ ಕೃತ್ಯವನ್ನೂ ಚಿತ್ರೀಕರಿಸಿದ್ದ. ನಂತರ ಟಿಫಿನ್ ಬಾಯ್ ಬ್ಲ್ಯಾಕ್‌ಮೇಲ್ ಮಾಡಲು ವಿಡಿಯೋವನ್ನು ಬಳಸಿಕೊಂಡಿದ್ದಾನೆ ಮತ್ತು ಆರರಿಂದ ಏಳು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಸಹಾಯಕ್ಕಾಗಿ ಹಾಸ್ಟೆಲ್ ಮಾಲೀಕರನ್ನು ಸಂಪರ್ಕಿಸಿದಾಗ, ಅವರು ಮೊದಲು ಟಿಫಿನ್ ಹುಡುಗನನ್ನು ಮದುವೆಯಾಗಲು ಅವಳನ್ನು ಮನವೊಲಿಸಲು ಪ್ರಯತ್ನಿಸಿದರು. ಅವಳು ನಿರಾಕರಿಸಿದಾಗ, ಹಾಸ್ಟೆಲ್ ಮಾಲೀಕ ಯಾರಿಗೂ ಹೇಳದಂತೆ ತಿಳಿಸಿದ್ದ. ಇದು ಕುಟುಂಬದವರಿಗೆ ಗೊತ್ತಾದರೆ ಅವರಿಗೆ ಅಗೌರವ ತರುತ್ತದೆ ಎಂದು ಹೇಳಿದ್ದ. ಹಾಸ್ಟೆಲ್ ಮಾಲೀಕ ಟಿಫಿನ್ ಹುಡುಗನಿಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಟಿಫಿನ್ ಹುಡುಗನ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಿಸಿದ್ದಾರೆ ಹಾಸ್ಟೆಲ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಚೌಧರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read