ಸೌಂದರ್ಯಕ್ಕೂ – ಆರೋಗ್ಯಕ್ಕೂ ಬೆಸ್ಟ್ ʼಬೇವಿನೆಲೆʼ

ಹಲವಾರು ಔಷಧೀಯ ಗುಣಗಳಿರುವ ಬೇವಿನ ಎಲೆ, ತೊಗಟೆ, ಹೂವು, ಬೀಜಗಳಿಂದ ಅನೇಕ ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಪ್ರಯೋಜನಗಳಿವೆ.

* ಬೇವಿನ ಎಲೆಯ ಹೊಗೆಯಿಂದ ಸೊಳ್ಳೆ ಮುಂತಾದ ಕೀಟಗಳನ್ನು ಓಡಿಸಬಹುದು.

* ಧಾನ್ಯಗಳಲ್ಲಿ ಬೇವಿನ ಎಲೆ ಹಾಕಿಟ್ಟರೆ ಹುಳಗಳ ಕಾಟ ಇರುವುದಿಲ್ಲ.

* ಬೇವಿನ ಸೊಪ್ಪನ್ನು ಕುದಿಸಿದ ನೀರಿನಿಂದ ತಲೆ ಕೂದಲು ತೊಳೆದರೆ ಹೊಟ್ಟು ಮತ್ತು ತುರಿಕೆ ನಿವಾರಣೆಯಾಗುತ್ತದೆ.
* ಬೇವಿನ ತೊಗಟೆಯ ಭಸ್ಮದ ಲೇಪನದಿಂದ ಗಾಯ ಮತ್ತು ಹುಣ್ಣು ವಾಸಿಯಾಗುತ್ತದೆ.

* ಬೇವಿನೆಲೆಯ ರಸಕ್ಕೆ ಕಲ್ಲುಸಕ್ಕರೆ ಹಾಕಿ ಸೇವಿಸಿದರೆ ಆರಂಭಿಕ ಕಾಮಾಲೆ ನಿವಾರಣೆಯಾಗುತ್ತದೆ.

* ಬೇವಿನೆಣ್ಣೆ ಮತ್ತು ತುಳಸಿ ಎಲೆ ಹಾಕಿದ ನೀರಿನ ಸ್ನಾನದಿಂದ ಕಜ್ಜಿ ಮತ್ತು ಹುಣ್ಣು ಮಾಯವಾಗುತ್ತವೆ.

* ಬೇವಿನೆಣ್ಣೆಯ ಕಷಾಯ ಹಾಗೂ ಎಳ್ಳೆಣ್ಣೆ ಚರ್ಮದ ತುರಿಕೆ ನಿವಾರಣೆಗೆ ಬೆಸ್ಟ್.

* ಬೇವಿನೆಣ್ಣೆ ಹೇನನ್ನು ದೂರಮಾಡುತ್ತದೆ.

* ಬೇವಿನ ಸೊಪ್ಪಿನ ರಸಕ್ಕೆ ಜೇನುತುಪ್ಪ ಹಾಕಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ.

* ಬೇವಿನ ಹೂವು ನೆನೆಸಿದ ನೀರನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಬೇವಿನೆಲೆಯ ರಸಕ್ಕೆ ಇಂಗು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಜಂತುಹುಳುಗಳು ಸಾಯುತ್ತವೆ.

* ಗಿಡಗಳಿಗೆ ಬೇವಿನೆಲೆಯ ರಸ ಸಿಂಪಡಣೆಯಿಂದ ಕೀಟಬಾಧೆ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read