ಹೊಸ ವರ್ಷದ ಮುನ್ನಾದಿನ ರೇವ್ ಪಾರ್ಟಿ ಮೇಲೆ ರೇಡ್: 100 ಮಂದಿ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ರೇವ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಡ್ರಗ್ಸ್ ಸೇವಿಸಿದ ಶಂಕೆಯ ಮೇಲೆ ಸುಮಾರು 100 ಜನರನ್ನು ಬಂಧಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಾರ್ಟಿ ನಡೆದಿದ್ದು, ಭಾನುವಾರ ಬೆಳಗಿನಜಾವ ದಾಳಿ ನಡೆಸಲಾಗಿದೆ. ಬಂಧಿತರಲ್ಲಿ ಪಾರ್ಟಿ ಆಯೋಜಿಸಿದ್ದ ಇಬ್ಬರು ಕೂಡ ಸೇರಿದ್ದಾರೆ. ಥಾಣೆ ಪೊಲೀಸ್‌ನ ಕ್ರೈಂ ಬ್ರಾಂಚ್ ಘಟಕವು ತಡರಾತ್ರಿಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದು, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆರಂಭವಾಯಿತು.

ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಈವೆಂಟ್‌ನಲ್ಲಿ ಮಾದಕವಸ್ತು ಸೇವನೆಯನ್ನು ಸೂಚಿಸುವ ಎಲ್‌ಎಸ್‌ಡಿ, ಗಾಂಜಾ ಸೇರಿದಂತೆ ವಿವಿಧ ಅಕ್ರಮ ವಸ್ತುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡರು. ಮಾದಕವಸ್ತು ಸೇವನೆ ಆರೋಪ ಖಚಿತಪಡಿಸಲು ಬಂಧಿತ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read