BIG NEWS: ಬೇಹುಗಾರಿಕೆ ಪ್ರಕರಣ: ನೌಕಾಪಡೆ ಸಿಬ್ಬಂದಿ ಅರೆಸ್ಟ್

ಜೈಪುರ: ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನ ಹ್ಯಾಂಡ್ಲರ್ ಬಳಿ ಹಂಚಿಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.

ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿದ್ದ ನೌಕಾಪಡೆ ಸಿಬ್ಬಂದಿ ವಿಶಾಲ್ ಯಾದವ್ ಬಂಧಿತ ಆರೋಪಿ. ವಿಶಾಲ್ ಯಾದವ್ ಆಪರೇಷನ್ ಸಿಂಧೂರ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ದಾಳಿಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ.

ವಿಶಾಲ್ ಯಾದವ್ ಮೂಲತಃ ಹರಿಯಾಣದ ರೇವರಿ ಜಿಲ್ಲೆಯವರು. ಭಾರತೀಯ ಮಹಿಳೆಯ ಸೋಗಿನಲ್ಲಿದ್ದ ಪಾಕಿಸ್ತಾನದ ಹ್ಯಾಂಡ್ಲರ್ ಜೊತೆಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅಲ್ಲದೇ ಮಹಿಳೆಯಿಂದ 2 ಲಕ್ಷ ಹಣ ಪಡೆದಿದ್ದರು. ಅದರಲ್ಲಿ ಆಪರೇಷನ್ ಸಿಂಧೂರ ಮಾಹಿತಿ ಹಂಚಿಕೊಂಡು 50 ಸಾವಿರ ಹಣ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಿಯಾ ಶರ್ಮಾ ಎಂಬ ನಕಲಿ ಫೇಸ್ ಬುಕ್ ಖಾತೆಯ ಮೂಲಕ ಯಾದವ್ ಮಹಿಳೆ ಜೊತೆ ಮಾಅಹಿತಿ ಹಂಚಿಕೊಳ್ಳುತ್ತಿದ್ದರು.

ಹಲವು ಏಜೆನ್ಸಿಗಳು ನಡೆಸಿದ ಜಂಟಿ ಕಾರ್ಯಾಚರಣೆ ವಿಶಾಲ್ ಯಾದವ್ ಮಾಹಿತಿ ಹಂಚಿಕೊಂಡಿರುವುದು ಸಾಬೀತಾಗಿದ್ದು, ಜೈಪುರದಲ್ಲಿ ಅವರನ್ನು ಬಂಧಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read