HomeKarnatakaBREAKING : ಜ.20 ರಂದು ನವೋದಯ 6ನೇ ತರಗತಿ ಪ್ರವೇಶಾತಿಗೆ ಪರೀಕ್ಷೆ , ಶಾಲೆಗಳಿಗೆ ರಜೆ...

BREAKING : ಜ.20 ರಂದು ನವೋದಯ 6ನೇ ತರಗತಿ ಪ್ರವೇಶಾತಿಗೆ ಪರೀಕ್ಷೆ , ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು : ನವೋದಯ ವಿದ್ಯಾಲಯ ಸಮಿತಿ (Jawahar Navodaya Vidyalaya Selection Test (JNVST) ಜನವರಿ 20 ರಂದು ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಈ ಹಿನ್ನೆಲೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ನಿಮ್ಮ ವ್ಯಾಪ್ತಿಗೆ ಒಳಪಡುವ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಮತ್ತು ಆಡಳಿತ ಮಂಡಳಿಗೆ ಸದರಿ ಪರೀಕ್ಷೆ ನಡೆಸಲು ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ತಿಳಿಸುವುದು ಹಾಗೂ ಪರೀಕ್ಷೆ ಕೆಲಸ ನಿರ್ವಹಿಸಲು ಸಿಬ್ಬಂದಿಯನ್ನು ಒದಗಿಸಲು ತಿಳಿಸಿದೆ. ದಿನಾಂಕ: 20.01.2024 ರಂದು ಶಾಲಾ ದಿನವಾಗಿರುವುದರಿಂದ, ಈ ಒಂದು ದಿನ ಪರೀಕ್ಷಾ ಕೇಂದ್ರ ಇರುವ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿ ಸದರಿ ಕೊರತೆಯನ್ನು ಮುಂದಿನ ಒಂದು ಶನಿವಾರದಂದು ಪೂರ್ಣಾವಧಿ ಶಾಲೆ ನಡೆಸುವಂತೆ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ನವೋದಯ ವಿದ್ಯಾಲಯ ಸಮಿತಿ 6 ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಹಂತ 1 ಪರೀಕ್ಷೆಯು 04 ನವೆಂಬರ್ 2024 ರಂದು ನಡೆದಿದ್ದು, . ಅದರ ನಂತರ, ಹಂತ 2 ಪರೀಕ್ಷೆಯನ್ನು ಅಂದರೆ ಎರಡನೇ ಹಂತವನ್ನು 20 ಜನವರಿ 2024 ರಂದು ನಡೆಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular