HomeIndiaಪಾಕಿಸ್ತಾನಕ್ಕೆ ನೌಕಾದಳದ ಮಾಹಿತಿ ರವಾನೆ: ಕಾರವಾರದಲ್ಲಿ ಮೂವರ ವಿಚಾರಣೆ

ಪಾಕಿಸ್ತಾನಕ್ಕೆ ನೌಕಾದಳದ ಮಾಹಿತಿ ರವಾನೆ: ಕಾರವಾರದಲ್ಲಿ ಮೂವರ ವಿಚಾರಣೆ

ಕಾರವಾರ: ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋ, ಮಾಹಿತಿಗಳನ್ನು ಪಾಕಿಸ್ತಾನ ಮತ್ತು ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ರಾಷ್ಟ್ರೀಯ ತನಿಖಾ ದಳ(NIA) ವಿಚಾರಣೆಗೆ ಒಳಪಡಿಸಿದೆ.

ಎನ್ಐಎ ಮೂವರು ಅಧಿಕಾರಿಗಳು ಸೇರಿ ಆರು ಮಂದಿಯ ತಂಡ ಕಾರವಾರಕ್ಕೆ ಆಗಮಿಸಿದೆ. ನೌಕಾದಳದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೊಡೂರಿನ ಸುನಿಲ್ ನಾಯ್ಕ, ಮುದಗಾದ ವೇತನ್ ತಾಂಡೇಲಾ ಹಾಗೂ ಅಂಕೋಲಾದ ಅಳವಳ್ಳಿಯ ಅಕ್ಷಯ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ದೇಶ ವಿರೋಧಿ ಚಟುವಟಿಕೆಯ ಆರೋಪದ ಮೇಲೆ 2023ರಲ್ಲಿ ಹೈದರಾಬಾದ್ ನಲ್ಲಿ ದೀಪಕ್ ಮತ್ತಿತರರನ್ನು ರಾಷ್ಟ್ರೀಯ ತನಿಖಾದಳ ಬಂಧಿಸಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಮೂವರ ಹೆಸರನ್ನು ಹೇಳಿದ್ದರು. ನೌಕಾಪಡೆಯ ಯುದ್ಧ ಹಡಗು ಸ್ಥಳದ ಮಾಹಿತಿ ಇರುವ ಫೋಟೋಗಳನ್ನು ಇವರು ದೀಪಕ್ ಎಂಬಾತನಿಗೆ ಕಳುಹಿಸಿದ ಆರೋಪವಿದೆ. ಈ ಮಾಹಿತಿ ನೀಡಿದ್ದಕ್ಕೆ ಪ್ರತಿಯಾಗಿ ಮೂವರಿಗೆ ಹಣ ಕೂಡ ಜಮೆ ಆಗಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೀಬರ್ಡ್ ನೌಕಾನೆಲೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಇತ್ತೀಚೆಗೆ ಗೋವಾದಲ್ಲಿ ಕೆಲಸ ಮಾಡುತ್ತಿದ್ದು ಆತನನ್ನು ಅಲ್ಲಿಯೇ ವಿಚಾರಣೆ ನಡೆಸಲಾಗಿದೆ. ಉಳಿದ ಇಬ್ಬರನ್ನು ಕಾರವಾರದಲ್ಲಿ ವಿಚಾರಣೆ ನಡೆಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular