ಗುಜರಾತಿನ ದುರ್ಗಾ ಜಿಲ್ಲೆಯ ಸಾತ್ಪುರ್ ಘಾಟ್ ನಲ್ಲಿ ಬಸ್ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆಳಗೆ ಬಿದ್ದಿದೆ. ಘಾಟ್ ನಲ್ಲಿ ಬಸ್ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬಸ್ ನಲ್ಲಿದ್ದ ಪ್ರಯಾಣಿಕನೊಬ್ಬ ಘಾಟ್ ನಲ್ಲಿ ಬಸ್ ಸಾಗುತ್ತಿದ್ದ ವಿಡಿಯೋ ಮಾಡ್ತಿದ್ದ. ಈ ವೇಳೆ ಅಪಘಾತದ ವಿಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಘಟನೆಯಲ್ಲಿ ಇಬ್ಬರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ.
ಟ್ರಕ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸುತ್ತಿದ್ದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಮಾಹಿತಿ ಪ್ರಕಾರ ಬಸ್ ನಲ್ಲಿ 70 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಗುಜರಾತ್ ನ ಸೂರತ್ ಮೂಲದವರು ಎನ್ನಲಾಗಿದೆ. ಘಟನೆ ಜುಲೈ 7 ರಂದು ನಡೆದಿದೆ.
ನಾಗ್ಪುರ್ ಜಿಲ್ಲೆಯ ಬಾರ್ಡರ್ ನಲ್ಲಿ ಸಾತ್ಪುರ್ ಘಾಟ್ ಇದ್ದು, ಮಳೆಗಾಲದಲ್ಲಿ ಅದರ ಸೌಂದರ್ಯ ದುಪ್ಪಟ್ಟಾಗುತ್ತದೆ. ಅದನ್ನು ವೀಕ್ಷಣೆ ಮಾಡಲು ಇಲ್ಲಿಗೆ ಜನರ ದಂಡೇ ಹರಿದು ಬರುತ್ತದೆ.
https://twitter.com/lokmattimeseng/status/1810558432757301503?ref_src=twsrc%5Etfw%7Ctwcamp%5Etweetembed%7Ctwterm%5E1810558432757301503%7Ctwgr%5Ec1b25ce6f220a08e8c990f3d2f53298369e69d54%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flokmattimes-epaper-dhfd5012174f5c4159918eaf51ebc42a19%2Fnashikbusaccidentcaughtoncameravehiclecarryingpassengersfromgujaratfallsintovalleyterrifyingvideosurfaces-newsid-n621268789