HomeLatest NewsBIG NEWS : 'ನಮ್ಮ ಮೆಟ್ರೋ' ಪ್ರಯಾಣಿಕರೇ ಗಮನಿಸಿ; ಹಸಿರು ಮಾರ್ಗದಲ್ಲಿ ಇಂದು ತಾತ್ಕಾಲಿಕ ಸೇವಾ...

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರೇ ಗಮನಿಸಿ; ಹಸಿರು ಮಾರ್ಗದಲ್ಲಿ ಇಂದು ತಾತ್ಕಾಲಿಕ ಸೇವಾ ಬದಲಾವಣೆ|Namma Metro

ಬೆಂಗಳೂರು : ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಸಿಆರ್‌ಆರ್‌ಸಿ (CRRC) ಸಂಸ್ಥೆಯ ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಪರಿಚಯಿಸುವ ಮುನ್ನ, ಆಯುಕ್ತರ ರೈಲ್ವೆ ಸುರಕ್ಷತಾ (CMRS) ಅನುಮೋದನೆಗಾಗಿ ಆಗಸ್ಟ್ 7ರ ರಾತ್ರಿ ಜಂಟಿ ಪ್ರಯೋಗ ಹಾಗೂ ತಪಾಸಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಿಸಿದೆ.

ಏನಿದೆ ಬದಲಾವಣೆ?

  • ಯಶವಂತಪುರದಿಂದ ಮಾದಾವರದವರೆಗೆ (ಅಪ್ ಲೈನ್) ರಾತ್ರಿ 10:30ರಿಂದ 11:00 ಗಂಟೆಯವರೆಗೆ ಮೆಟ್ರೋ ರೈಲುಗಳು ಸಾಮಾನ್ಯ 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.
  • ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗೆ (ಡೌನ್ ಲೈನ್) ರೈಲು ಸಂಚಾರ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.

ಪ್ರಯಾಣಿಕರಿಗೆ ಮನವಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಎಂಆರ್‌ಸಿಎಲ್ ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಮನವಿ ಮಾಡಿದೆ. ತಾಂತ್ರಿಕ ಪರೀಕ್ಷೆಯ ಹಿನ್ನೆಲೆಯಲ್ಲಿ ಉಂಟಾಗುವ ಅನಾನುಕೂಲತೆಗೆ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ಪ್ರಯಾಣಿಕರ ಸಹಕಾರ ಕೋರಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular