ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚಿರತೆ

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಗೊಂಡ ನಮೀಬಿಯಾದ ಚಿರತೆಯೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

ಮರಿಗಳ ಜನನದ ಮಾಹಿತಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ ಹಂಚಿಕೊಂಡಿದ್ದು, ಟ್ವಿಟರ್‌ನಲ್ಲಿ ಮರಿಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಸಹ ಮರಿಗಳ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 8 ಚಿರತೆಗಳನ್ನು ಆಫ್ರಿಕನ್ ದೇಶದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ಸ್ಥಳಾಂತರಿಸಲಾಯಿತು.

8 ಚಿರತೆಗಳಲ್ಲಿ ಒಂದಾದ ಸಶಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದ ಮೂರು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ನಾಲ್ಕೂವರೆ ವರ್ಷಕ್ಕಿಂತ ಹೆಚ್ಚು ಪ್ರಾಯದ ಸಶಾ ಚಿರತೆ ಸಾವಿನಿಂದಾಗಿ ಪ್ರಾಜೆಕ್ಟ್ ಚೀತಾಗೆ ಹಿನ್ನಡೆಯಾಗಿತ್ತು.

https://twitter.com/byadavbjp/status/1640989652239925249?ref_src=twsrc%5Etfw%7Ctwcamp%5Etweetembed%7Ctwterm%5E1640989652239925249%7Ctwgr%5E0d38de4868753b0b1dabbd28d45902960c2f1f4a%7Ctwcon%5Es1_&ref_url=https%3A%2F%2Fwww.opindia.com%2F2023%2F03%2Fsiyaya-cheetah-namibia-to-india-gives-birth-four-cubs-kuno-national-park-cheetah-first-after-79-years%2F

https://twitter.com/byadavbjp/status/1640989656299831297?ref_src=twsrc%5Etfw%7Ctwcamp%5Etweetembed%7Ctwterm%5E1640989656299831297%7Ctwgr%5E0d38de4868753b0b1dabbd28d45902960c2f1f4a%7Ctwcon%5Es1_&ref_url=https%3A%2F%2Fwww.opindia.com%2F2023%2F03%2Fsiyaya-cheetah-namibia-to-india-gives-birth-four-cubs-kuno-national-park-cheetah-first-after-79-years%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read