HomeKarnatakaಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಹಗಲು ರಾತ್ರಿ ಧರಣಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಹಗಲು ರಾತ್ರಿ ಧರಣಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಹಗಲು ರಾತ್ರಿ ಧರಣಿ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಒಬ್ಬ ಸಚಿವನಿಗಾಗಿ ಇಡೀ ಸದನವನ್ನು ಹಾಳು ಮಾಡಿ, ಬರಗಾಲ, ನೈಸ್‌ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಸುವುದನ್ನು ತಪ್ಪಿಸುತ್ತಿದ್ದೀರಿ. ನಾವು ಈ ಬಗ್ಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಮೊದಲು ಸಚಿವರಿಂದ ರಾಜೀನಾಮೆ ಪಡೆದು ಚರ್ಚೆಗೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರಕ್ಕೆ ಈಗಲೂ ಅವಕಾಶವಿದೆ. ಪ್ರತಿಪಕ್ಷದವರು ಮಾತಾಡುವುದನ್ನು ವಿಧಾನಸಭೆಯ ವೀಡಿಯೋದಲ್ಲಿ ತೋರಿಸುತ್ತಿಲ್ಲ. ವಾರ್ತಾ ಇಲಾಖೆಯ ಆಯುಕ್ತರಿಗೆ ಮಾನ ಮಾರ್ಯದೆ ಇಲ್ಲ. ವಾರ್ತಾ ಇಲಾಖೆಗೆ ಈ ಬಗ್ಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ದಲಿತರ ಹಣ ವಾಪಸ್‌ ಬರಬೇಕು ಹಾಗೂ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾವು ಹಗಲು ರಾತ್ರಿ ಧರಣಿ ಮಾಡುತ್ತೇವೆ ಎಂದರು.

*ಉದ್ಯಾನಗಳ ನಾಶ*

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯಾನ ನಾಶ ಮತ್ತು ಅದಾನಿ ಆರೋಪ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಸರ್ಕಾರ ಸಚಿವ ಬಿ.ನಾಗೇಂದ್ರ ಪರವಾಗಿ ನಿಂತಿದೆ. ಏಕೆಂದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪಾಲು ಸಿಕ್ಕಿದೆ. ಉದ್ಯಮಿ ಗೌತಮ್‌ ಅದಾನಿ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ್ದಾರೆ. ಅವರಿಗಾಗಿ ಸುರಂಗ ರಸ್ತೆ ಯೋಜನೆಗಾಗಿ ಉದ್ಯಾನಗಳ ಶೇ.5 ರಷ್ಟು ಜಾಗವನ್ನು ಕಬಳಿಕೆ ಮಾಡುವ ಕಾನೂನು ತರಲಾಗುತ್ತಿದೆ. ಈ ಮೂಲಕ ಬೆಂಗಳೂರನ್ನು ಮಾಲಿನ್ಯ ನಗರವಾಗಿ ಮಾಡಲಾಗುತ್ತಿದೆ. ಲಾಲ್‌ಬಾಗ್‌, ಸ್ಯಾಂಕಿ ಟ್ಯಾಂಕ್‌, ಕಬ್ಬನ್‌ ಪಾರ್ಕ್‌ ಉದ್ಯಾನಗಳನ್ನು ನಾಶ ಮಾಡಲಾಗುತ್ತಿದೆ. ಇನ್ನು ಬೆಂಗಳೂರು ಗಾರ್ಡನ್‌ ಸಿಟಿಯಿಂದ ಪೊಲ್ಯೂಟೆಡ್‌ ಸಿಟಿಯಾಗಿ ಹಾಗೂ ದೆಹಲಿಯಾಗಿ ಬದಲಾಗಲಿದೆ. ಇಂತಹ ಕಾನೂನು ತರುವ ಮುನ್ನ ನಗರದ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಬೇಕಿತ್ತು. ನಗರದಲ್ಲಿ ಪ್ರತಿ 10 ಜನರಲ್ಲಿ ಒಬ್ಬರಿಗೆ ಅಸ್ತಮಾ ಕಾಯಿಲೆ ಕಂಡುಬರುತ್ತಿದೆ. ಅದಾನಿ ಅವರನ್ನು ಬಿಜೆಪಿ ಏಜೆಂಟ್‌ ಎಂದಿರುವ ಕಾಂಗ್ರೆಸ್‌, ಈಗ ಅವರಿಗೆ ರೆಡ್‌ ಕಾರ್ಪೆಟ್‌ ಹಾಸಿ ಕರೆದಿದೆ ಎಂದರು.

ಈಗಾಗಲೇ ನೈಸ್‌ ಟೋಲ್‌ ವಿರುದ್ಧ ಜನರು ಸಿಟ್ಟಿಗೆದ್ದಿದ್ದಾರೆ. ಉದ್ಯಾನಗಳಲ್ಲಿ ಶೇ.5 ಭೂ ಬಳಕೆ ಕುರಿತು ಜನರ ನಡುವೆ ಚರ್ಚೆಯಾಗಬೇಕಿತ್ತು. ಬಿಜೆಪಿ ಕೂಡ ಈ ಬಗ್ಗೆ ಚರ್ಚೆ ನಡೆಸಲು ಸಿದ್ಧವಿದೆ. ಆದರೆ ಸರ್ಕಾರ ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ. ಮುಖ್ಯವಾಗಿ ಬರಗಾಲದ ಬಗ್ಗೆ ನಾವು ಚರ್ಚೆ ನಡೆಸಬೇಕಿದೆ. ಹೀಗೆ ಆದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು ಮನೆಗೆ ಕಳುಹಿಸುತ್ತಾರೆ. ಯಾವುದೇ ದಲಿತರು ಮತ ನೀಡುವುದಿಲ್ಲ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular