HomeKarnatakaನಾಗಾ ಸಾಧುಗಳ ವೇಷದಲ್ಲಿ ಬಂದ ಕಳ್ಳರು; ಸ್ಟುಡಿಯೋ ಮಾಲೀಕನ ಚಿನ್ನದುಂಗರವನ್ನೇ ಕದ್ದು ಪರಾರಿ

ನಾಗಾ ಸಾಧುಗಳ ವೇಷದಲ್ಲಿ ಬಂದ ಕಳ್ಳರು; ಸ್ಟುಡಿಯೋ ಮಾಲೀಕನ ಚಿನ್ನದುಂಗರವನ್ನೇ ಕದ್ದು ಪರಾರಿ

ತುಮಕೂರು: ತುಮಕೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ನಾಗಾ ಸಾಧುಗಳ ವೇಷದಲ್ಲಿ ಬಂದ ಖದೀಮರು, ಸ್ಟುಡಿಯೋ ಮಾಲೀಕನ ಚಿನ್ನದುಂಗರವನ್ನೇ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ನಾಗಾ ಸಾಧುಗಳು ಎಂದು ಹೇಳಿಕೊಂಡು ಬಂದಿದ್ದ ಇಬ್ಬರಿಗೆ ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಫೋಟೋ ಸ್ಟುಡಿಯೋ ಮಾಲೀಕ ಬಾಳೆಹಣ್ಣು, ನೀರು ಕೊಟ್ಟು ಸತ್ಕಾರ ಮಾಡಿದ್ದಾನೆ. ಆ ಬಳಿಕ ಸಾಧುಗಳು ಮಾಲೀಕನ ಕೈಗೆ ರುದ್ರಾಕ್ಷಿಕೊಟ್ಟು ಕಣ್ಣುಮುಚ್ಚಿ ಜಪ ಮಾಡಿಸಿದ್ದಾರೆ. ಮಾಲೀಕನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡ ಸಾಧುಗಳು ಆತನಿಗೆ ಗೊತ್ತಾಗದಂತೆಯೇ ಬೆರಳಿನಲ್ಲಿದ್ದ ಉಂಗುರವನ್ನು ಎಗರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ನಿಮಿಷ ಹೀಗೆ ಕಣ್ಮುಚ್ಚಿ ಧ್ಯಾನ ಮಾಡಿ ಎಂದು ಹೇಳಿದ ನಾಗಾ ಸಾಧುಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಧ್ಯಾನಮುಗಿಸಿ ಹೊರಬಂದ ಸ್ಟುಡಿಯೋ ಮಾಲೀಕ ಕೈಗಳನ್ನು ನೋಡಿಕೊಂಡಾಗ ಕೈಯಲ್ಲಿದ್ದ ಉಂಗುರ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷಣ ತುಮಕೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular