ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ…!

1963 ರಲ್ಲಿ ರಾಜ್ಯವಾಗಿ ಉದಯವಾದ ಬಳಿಕ ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ.

ಈ ಇಬ್ಬರೂ ಕೂಡ ನ್ಯಾಷನಲ್ ಡೆಮೊಕ್ರೆಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಅಭ್ಯರ್ಥಿಗಳಾಗಿ ಚುನಾಯಿತರಾಗಿರುವುದು ವಿಶೇಷ. ಹೆಖಾನಿ ಜಖಲು ದಿಮಾಪುರ್ ಕ್ಷೇತ್ರದಿಂದ ಆಯ್ಕೆಯಾಗಿದ್ದರೆ, ಸಲೌಟೊ ಕೃಸೆ ಅಂಗಾಮಿ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಹೆಖಾನಿ ಜಖಲು ಅಮೆರಿಕದಲ್ಲಿ ಕಾನೂನು ಪದವಿ ಪಡೆದಿದ್ದು, ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪುರಸ್ಕಾರಕ್ಕೂ ಇವರು ಭಾಜನರಾಗಿದ್ದರು. ಇನ್ನು ಸಲೌಟೊ ಕೃಸೆ ಕೇವಲ ಏಳು ಮತಗಳ ಅಂತರದಿಂದ ಆಯ್ಕೆಯಾಗಿರುವುದು ಮತ್ತೊಂದು ವಿಶೇಷ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read