HomeIndia’ಕರಾಟೆ ಕಲಿಗಳೊಂದಿಗೆ ಸುಮೋ ಕುಸ್ತಿಪಟು’: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ ನಾಗಾಲ್ಯಾಂಡ್ ಸಚಿವರ ಫೋಟೋ ಟ್ವೀಟ್

’ಕರಾಟೆ ಕಲಿಗಳೊಂದಿಗೆ ಸುಮೋ ಕುಸ್ತಿಪಟು’: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ ನಾಗಾಲ್ಯಾಂಡ್ ಸಚಿವರ ಫೋಟೋ ಟ್ವೀಟ್

ನಾಗಾಲ್ಯಾಂಡ್‌ನ ಪ್ರೌಢಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಹಾಸ್ಯ ಪ್ರಜ್ಞೆಯಿಂದ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರ ಪೋಸ್ಟ್‌ಗಳನ್ನು ನೆಟ್ಟಿಗರು ಭಾರೀ ಎಂಜಾಯ್ ಮಾಡುತ್ತಾರೆ.

ಈ ಬಾರಿ ಸಮರ ಕಲೆಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಫೋಟೋ ತೆಗೆಸಿಕೊಂಡಿರುವ ಅಲಾಂಗ್, ಆ ಫೋಟೋಗೊಂದು ಫನ್ನಿ ಕ್ಯಾಪ್ಷನ್ ಹಾಕಿ ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರಾಟೆ ಗೆಟಪ್‌ನಲ್ಲಿರುವ ಮಕ್ಕಳೊಂದಿಗೆ ಕ್ಯಾಶುವಲ್ ಧಿರಿಸಿನಲ್ಲಿ ನಿಂತಿರುವ ತಮ್ಮ ಫೋಟೋಗೆ “ಕರಾಟೆ ಮಕ್ಕಳೊಂದಿಗೆ ಸುಮೋ ಕುಸ್ತಿ ಪಟು,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ ಅಲಾಂಗ್.

ತಮ್ಮನ್ನೇ ತಾವು ತಮಾಷೆ ಮಾಡಿಕೊಳ್ಳುವ ಅಲಾಂಗ್‌ರ ಈ ವ್ಯಕ್ತಿತ್ವಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿಬಿಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular