ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿರುತ್ತಾರೆ.
ಈ ಬಾರಿ ಜಾನಪದ ನೃತ್ಯಗಾರರೊಂದಿಗೆ ಹೆಜ್ಜೆ ಹಾಕುತ್ತಿರುವ ತಮ್ಮ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ ಅಲಾಂಗ್. ಸಾಂಪ್ರದಾಯಿಕ ನಾಗಾ ಧಿರಿಸಿನಲ್ಲಿ ಕಂಗೊಳಿಸುವ ನೃತ್ಯಗಾತಿಯರೊಂದಿಗೆ ಭಾರೀ ಖುಷಿಯಾಗಿ ಹೆಜ್ಜೆ ಹಾಕಿದ್ದಾರೆ ಅಲಾಂಗ್.
ಸಿನಿಮೀಯ ಡೈಲಾಗ್‌ಗಳನ್ನು ಕ್ಯಾಪ್ಷನ್ ಆಗಿ ಹಾಕಿರುವ ಅಲಾಂಗ್, ’ಎಂದಾದರೂ ನಾಗಾಲ್ಯಾಂಡ್‌ಗೆ ಬನ್ನಿ,” ಎಂದು ಈ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
https://twitter.com/AlongImna/status/1651100040587526144?ref_src=twsrc%5Etfw%7Ctwcamp%5Etweetembed%7Ctwterm%5E1651100040587526144%7Ctwgr%5E13989e129d5bc0d15904055d75710f0fdfc0133c%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fnagaland-minister-temjen-along-tweaks-aao-kabhi-haveli-pe-dialogue-to-share-this-adorable-video-on-twitter-watch