ಮೈಸೂರು: ಒಣಗಿದ ದಾಸವಾಳದ ಹೂವು ನುಂಗಿದ 6 ತಿಂಗಳ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರಿನಲ್ಲಿ ನಡೆದಿದೆ.
6 ತಿಂಗಳ ಮಗು ಚಿನ್ಮಯಿ ಗೌಡ ಮೃತ ಕಂದಮ್ಮ. ಮನೆ ಹೊಸ್ತಿಲಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವು ಒಣಗಿ ಹೋಗಿತ್ತು. ಅದನ್ನು ಮಗು ಬಾಯಿಗೆ ಹಾಕಿ ನುಂಗಿದ್ದು, ತೀವ್ರ ಅಸ್ವಸ್ಥವಾಗಿದ್ದ ಮಗುವನ್ನು ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ. ಚಿನ್ಮಯಿ ಗೌಡ ಸುದರ್ಶನ್ ಹಾಗೂ ನವ್ಯಾ ದಂಪತಿಯ ಎರಡನೇಯ ಪುತ್ರ. ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

