HomeKarnatakaBIG NEWS: ಕಳ್ಳರಿಗೆ ಪೊಲೀಸಪ್ಪನಿಂದಲೇ ಸಾಥ್: ಹೆಡ್ ಕಾನ್ಸ್ ಟೇಬಲ್ ಸೇರಿ ಮೂವರು ಅರೆಸ್ಟ್

BIG NEWS: ಕಳ್ಳರಿಗೆ ಪೊಲೀಸಪ್ಪನಿಂದಲೇ ಸಾಥ್: ಹೆಡ್ ಕಾನ್ಸ್ ಟೇಬಲ್ ಸೇರಿ ಮೂವರು ಅರೆಸ್ಟ್

ಮೈಸೂರು: ಕಳ್ಳರನ್ನು ಹಿಡಿಯಬೇಕಾಗಿದ್ದ ಪೊಲಿಸಪ್ಪನೇ ಮನೆಗಳ್ಳತನಕ್ಕೆ ಸಾಥ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಮನೆಗಳ್ಳರಿಗೆ ಸಾಥ್ ನೀಡಿದ್ದ ಹೆಡ್ ಕಾನ್ಸ್ ಟೇಬಲ್ ಸೇರಿದಂತೆ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಅಶೋಕಪುರಂ ಠಾಣೆಯ ಹೆಡ್ ಕಾನ್ಸ್ ಟೇಬಲ್ ರಾಜು, ನಜರುಲ್ಲಾ ಬಾಬು ಹಾಗೂ ಅಲೀಂ ಬಂಧಿತ ಆರೋಪಿಗಳು.

ಮೈಸೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಜರುಲ್ಲಾ ಬಾಬು ಹಾಗೂ ಅಲೀಂ 400 ಗ್ರಾಂ ಚಿನ್ನಾಭರಣ ಕಳುವು ಮಾಡಿದ್ದರು. ಹೀಗೆ ಕದ್ದ 400 ಗ್ರಾಂ ಚಿನ್ನದಲ್ಲಿ 300 ಗ್ರಾಮ್ ಚಿನ್ನವನ್ನು ಹೆಡ್ ಕಾನ್ಸ್ ಟೇಬಲ್ ರಾಜುಗೆ ಕೊಟ್ಟಿದ್ದರು. ಉಳಿದ 100 ಗ್ರಾಮ್ ಚಿನ್ನ ಮಾರಾಟಕ್ಕೆ ಯತ್ನಿಸಿದಾಗ ಕಳ್ಳರು ಸಿಕ್ಕಿಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರು ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹೆಚ್ ಸಿ ರಾಜು ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೀಗ ಹೆಡ್ ಕಾನ್ಸ್ ಟೇಬಲ್ ರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಕೇಸ್ ಗಳಲ್ಲಿ ರಾಜು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular