HomeLatest NewsBREAKING: ಮೈಸೂರು ಡಿಸಿ ಕಚೇರಿ ಬಳಿ ಹೈಡ್ರಾಮ: ದೇವರಾಜ್ ಅರಸು ಪ್ರತಿಮೆ ಇಂದೇ ಅನಾವರಣಕ್ಕೆ ಆಗ್ರಹಿಸಿ...

BREAKING: ಮೈಸೂರು ಡಿಸಿ ಕಚೇರಿ ಬಳಿ ಹೈಡ್ರಾಮ: ದೇವರಾಜ್ ಅರಸು ಪ್ರತಿಮೆ ಇಂದೇ ಅನಾವರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯ್ ಮೈಸೂರಿನಲ್ಲಿ ಹೈಡ್ರಾಮಾ ನಡೆದಿದೆ. ದೇವರಾಜ್ ಅರಸು ಪ್ರತಿಮೆ ಇಂದೇ ಅನಾವರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ದೇವರಾಜ್ ಅರಸು ಅವರ ಪ್ರತಿಮೆ ಲೋಕಾರ್ಪಣೆಗೆ ಸರ್ಕಾರ ವಿಳಂಬ ಮಾಡುತ್ತಿರುವ ಧೋರಣೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಇಂದೇ ಅರಸು ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಬೇಕು. ಕನ್ನಡ ರಾಜ್ಯೋತ್ಸವ ದಿನವಾದ ಇಂದಿಗಿಂತ ಒಳ್ಳೆಯದಿನ ಬೇರೆ ಇಲ್ಲ. ಇಂದೇ ಪ್ರತಿಮೆ ಲೋಕಾರ್ಪಣೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಇದೇ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular