HomeLatest Newsಎಷ್ಟುಹೊತ್ತು ಕಾದರೂ ಬಾರದ ಬಸ್: ಶಾಲೆಗೆ ಹೋಗಲು ಹಾಲಿನ ವಾಹನ ಹತ್ತಿ ಸಾಗಿದ ವಿದ್ಯಾರ್ಥಿಗಳು; ವಾಹನ...

ಎಷ್ಟುಹೊತ್ತು ಕಾದರೂ ಬಾರದ ಬಸ್: ಶಾಲೆಗೆ ಹೋಗಲು ಹಾಲಿನ ವಾಹನ ಹತ್ತಿ ಸಾಗಿದ ವಿದ್ಯಾರ್ಥಿಗಳು; ವಾಹನ ಪಲ್ಟಿ: 7 ಜನರಿಗೆ ಗಂಭೀರ ಗಾಯ

ಮೈಸೂರು: ಶಾಲೆಗೆ ತೆರಳು ವಿದ್ಯಾರ್ಥಿಗಳು ಬಸ್ ಗಾಗಿ ಎಷ್ಟು ಹೊತ್ತು ಕಾದರೂ ಬಸ್ ಬಾರದಿದ್ದಾಗ ಹಾಲಿನ ವಾಹನ ಹತ್ತಿ ತೆರಳಿದ್ದು, ದುರದೃಷ್ಟವಶಾತ್ ಹಾಲಿನ ವಾಹನ ಪಲ್ಟಿಯಾಗಿ ಬಿದ್ದಿರುವ ಘಟನೆ ಮೈಸೂರು ಜಿಲ್ಲ್ರೆಯ ಹುಣಸೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ.

ಹುಣಸೂರಿನ ಬನ್ನುಕುಪ್ಪೆ ಪ್ರೌಢಶಾಲೆಗೆ ತೆರಳು ವಿದ್ಯಾರ್ಥಿಗಳು ಬಸ್ ಬಂದಿಲ್ಲ ಎಂದು ಹಾಲಿನ ವಾಹನ ಹತ್ತಿ ಸಾಗಿದ್ದಾರೆ. ಆದರೆ ವಾಹನ ಪಲ್ಟಿಯಾಗಿ ಬಿದ್ದ ಪರಿಣಾಮ 7 ಜನರು ಗಾಯಗೊಂಡಿದ್ದಾರೆ.

ಗಾಯಾಳು ವಿದ್ಯಾರ್ಥಿಗಳನ್ನು ಪಾಲಾಕ್ಷ, ವಿದ್ಯಾಚರಣ, ಅಪ್ಪು, ನಿತಿನ್, ಚಂದ್ರಶೇಖರ್, ಮನುಕುಮಾರ್, ಸಂಜಯ್ ಎಂದು ಗುರುತುಸಲಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಲಾಕ್ಷಾ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular