ಚಾಲಕನ ಮೇಲೆ ಮೋಹ ಬೆಳೆಸಿಕೊಂಡ ಉದ್ಯಮಿ ಪತ್ನಿಯಿಂದ ಘೋರ ಕೃತ್ಯ

ಹೊಸೂರು: ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಕೃಷ್ಣಗಿರಿ ಜಿಲ್ಲೆಯ ಉದ್ದನಪಲ್ಲಿ ಸಮೀಪ ನಡೆದಿದೆ.

ಸಾಲಮಾವು ಅರಣ್ಯ ಪ್ರದೇಶದಲ್ಲಿ ಗಂಡನನ್ನು ಕೊಲೆ ಮಾಡಿ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದ್ದು, ಧರ್ಮಪುರಿ ಜಿಲ್ಲೆಯ ಬೆಣ್ಣಗಾರಂನ ರಿಯಲ್ ಎಸ್ಟೇಟ್ ಉದ್ಯಮಿ ಪ್ರಕಾಶ್(43) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಲಕ್ಷ್ಮಿ(36)0 ಕೊಲೆ ಆರೋಪಿಯಾಗಿದ್ದಾಳೆ.

ಮೇ 19ರಂದು ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪ್ರಕಾಶ್ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಉದ್ದನಪಲ್ಲಿ ಠಾಣೆ ಇನ್ಸ್ ಪೆಕ್ಟರ್ ಸುಬ್ರಮಣಿ ಮತ್ತು ಸಿಬ್ಬಂದಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹೊಸೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ತನಿಖೆ ಕೈಗೊಂಡು ಪ್ರಕಾಶ್ ಪತ್ನಿ ಲಕ್ಷ್ಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ವ್ಯಾನ್ ಚಾಲಕ ಚಿನ್ನರಾಜು(38)ನನ್ನು ಶಾಲಾ ದಿನಗಳಿಂದಲೂ ಪ್ರೀತಿಸುತ್ತಿದ್ದ ಲಕ್ಷ್ಮಿ ಮದುವೆಯ ನಂತರವೂ ಆತನೊಂದಿಗೆ ಸಂಬಂಧ ಮುಂದುವರೆಸಿದ್ದಳು. ಪ್ರೀತಿಗೆ ಅಡ್ಡಿಯಾಗಿದ್ದರಿಂದ ಗಂಡನ ಕೊಲೆ ಮಾಡಿ ಚಿನ್ನರಾಜು ಸಹಾಯ ಪಡೆದು ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ಸಾಗಿಸಿ ಸುಟ್ಟು ಹಾಕಿರುವುದಾಗಿ ತಿಳಿಸಿದ್ದಾಳೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read