HomeKarnatakaBREAKING : ಬೆಂಗಳೂರಲ್ಲಿ ಮಲಗಿದ್ದಲ್ಲೇ ತಂದೆ-ಮಗನ ನಿಗೂಢ ಸಾವು ; ಪತ್ನಿಯಿಂದಲೇ ಕೊಲೆ ಶಂಕೆ

BREAKING : ಬೆಂಗಳೂರಲ್ಲಿ ಮಲಗಿದ್ದಲ್ಲೇ ತಂದೆ-ಮಗನ ನಿಗೂಢ ಸಾವು ; ಪತ್ನಿಯಿಂದಲೇ ಕೊಲೆ ಶಂಕೆ

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ತಂದೆ-ಮಗ ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅಭಿನಂದನ್ (33) ಹಾಗೂ ಅವರ 5 ವರ್ಷದ ಪುತ್ರ ಯದುವೀರ್ ಮೃತರು. ಇಬ್ಬರ ಶವವೂ ಮಲಗಿದ್ದ ಜಾಗದಲ್ಲೇ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಭಿನಂದನ್ ಅವರ ಕಿವಿಯಲ್ಲಿ ರಕ್ತ ಸೋರಿಕೆಯಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ರಾತ್ರಿ ಕಿವಿಯಲ್ಲಿ ರಕ್ತ ಬಂದಿತ್ತು, ಅದಕ್ಕೆ ಅರಿಶಿಣ ಹಚ್ಚಿದ್ದೆ ಎಂದು ಪತ್ನಿ ಹರಿಣಿ ಹೇಳಿರುವುದಾಗಿ ತಿಳಿದುಬಂದಿದೆ.

ಆದರೆ, ಅಭಿನಂದನ್ ಅವರ ಪೋಷಕರು ಹಾಗೂ ಕುಟುಂಬಸ್ಥರು ಪತ್ನಿ ಹರಿಣಿ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರ ಸಾವಿನ ಹಿಂದೆಯೂ ಹರಿಣಿಯ ಕೈವಾಡ ಇರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಾರು ಆರು ವರ್ಷಗಳ ಹಿಂದೆ ಅಭಿನಂದನ್ ಅವರು ಹರಿಣಿಯನ್ನು ವಿವಾಹವಾಗಿದ್ದರು. ಈ ಹಿಂದೆ ಹರಿಣಿ ಬೇರೊಬ್ಬರೊಂದಿಗೆ ಓಡಿಹೋಗಿದ್ದಳು ಎಂಬ ಆರೋಪವನ್ನೂ ಅಭಿನಂದನ್ ಕುಟುಂಬಸ್ಥರು ಮಾಡಿದ್ದಾರೆ.

ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ತಂದೆ-ಮಗನ ಸಾವಿನ ನಿಜವಾದ ಕಾರಣ ಬಹಿರಂಗವಾಗುವ ನಿರೀಕ್ಷೆಯಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular