HomeIndiaವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ ವಿಮಾನವನ್ನು ಚಲಾಯಿಸುವ ಮುನ್ನ ತಂದೆಯನ್ನು ಅಪ್ಪಿಕೊಳ್ಳುವ ಭಾವುಕ ದೃಶ್ಯ ಸೆರೆಯಾಗಿದೆ.

ಏರ್‌ಬಸ್ 320 ಫ್ಲೈಟ್‌ನ ಕ್ಯಾಪ್ಟನ್ ಕ್ರುತಾಡ್ನ್ಯಾ ಹೇಲ್ ತನ್ನ ತಂದೆಯೊಂದಿಗೆ ವಿಮಾನದಲ್ಲಿ ಹಾರುತ್ತಿರುವುದನ್ನು ತೋರಿಸುವ ಇನ್​ಸ್ಟಾಗ್ರಾಮ್​ ರೀಲ್ ಹಂಚಿಕೊಂಡಿದ್ದಾರೆ. ಆಕೆಯ ಫ್ಲೈಟ್‌ನಲ್ಲಿ ತಂದೆ ಕೂಡ ಇದ್ದಾರೆ. ಮಗಳು ತಾವು ಟೇಕ್​ ಆಫ್​ ಮಾಡುವ ಮೊದಲು ತಂದೆಯ ಪಾದಕ್ಕೆ ಸ್ಪರ್ಶಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್​ ಆಗಿದ್ದು, ಜನರು ಭಾವುಕ ಕಮೆಂಟ್​ ಹಾಕುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಮಗಳು ದೊಡ್ಡ ಸಾಧನೆ ಮಾಡುತ್ತಿರುವುದನ್ನು ಕಂಡು ತಂದೆ ಭಾವುಕರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹೇಲ್ ಭಾರತ ಮತ್ತು ಸ್ಪೇನ್‌ನ ಮ್ಯಾಡ್ರಿಡ್ ನಡುವೆ ಪ್ರಯಾಣಿಸುತ್ತಿದ್ದು, ತನ್ನ ತಂದೆಯೊಂದಿಗೆ ಕೆಲವು ಕ್ಷಣಗಳನ್ನು ಕಳೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ತಂದೆಯ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುತ್ತಾರೆ ಹಾಗೂ ಟೇಕ್-ಆಫ್ ಮಾಡುವ ಮೊದಲು ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಪ್ರೀತಿ ಮತ್ತು ಕೃತಜ್ಞತೆಯಿಂದ ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular