HomeIndiaದುಂದುವೆಚ್ಚ ಮಾಡುತ್ತಿದ್ದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಜೈಲು ಪಾಲಾದ ಪತಿ; ಇಲ್ಲಿದೆ ಡೀಟೇಲ್ ಸ್ಟೋರಿ

ದುಂದುವೆಚ್ಚ ಮಾಡುತ್ತಿದ್ದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಜೈಲು ಪಾಲಾದ ಪತಿ; ಇಲ್ಲಿದೆ ಡೀಟೇಲ್ ಸ್ಟೋರಿ

ತಾನು ಕಷ್ಟಪಟ್ಟು ದುಡಿಯುತ್ತಿದ್ದರೆ ತನ್ನ ಪತ್ನಿ ಆ ಹಣವನ್ನು ಮನಬಂದಂತೆ ದುಂದು ವೆಚ್ಚ ಮಾಡುತ್ತಿದ್ದಾಳೆ ಎಂಬ ಅಸಮಾಧಾನ ಹೊಂದಿದ್ದ ಪತಿಯೊಬ್ಬ ಆಕೆಗೆ ಬುದ್ಧಿ ಕಲಿಸಲು ಹೋಗಿ ಈಗ ಜೈಲು ಪಾಲಾಗಿದ್ದಾನೆ. ಇದರ ಡಿಟೇಲ್ ಸ್ಟೋರಿ ಇಲ್ಲಿದೆ.

ಮುಂಬೈನ ಅಂದೇರೀ ವಾಸಿ 30 ವರ್ಷದ ಅಮೀರ್ ವೋಹ್ರಾ, ಫೆಬ್ರವರಿ 22ರಂದು ಅಗ್ರಿಪಾಡ ಪೊಲೀಸ್ ಠಾಣೆಗೆ ತೆರಳಿ ತಾನು ತಂದೆಯೊಂದಿಗೆ 44 ಲಕ್ಷ ರೂಪಾಯಿಗಳನ್ನು ತರುವಾಗ ಕೆಲ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದೋಚಿರುವುದಾಗಿ ದೂರು ನೀಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತನೊಂದಿಗೆ ಒಂದಷ್ಟು ಮಾಹಿತಿ ಪಡೆದುಕೊಳ್ಳಲು ಪೊಲೀಸರು ಮುಂದಾದಾಗ ಒಂದಕ್ಕೊಂದು ತಾಳಮೇಳ ಇಲ್ಲದಂತೆ ಉತ್ತರಿಸಿದ್ದಾನೆ. ಇದರ ಮಧ್ಯೆ ಅಮೀರ್ ವೋಹ್ರಾ ತಂದೆಗೆ ಪೊಲೀಸರು ಕರೆ ಮಾಡಿ ಮಾತನಾಡಿದ ವೇಳೆ ಅಚ್ಚರಿಗೊಂಡ ಅವರು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಆಗ ದೂರು ನೀಡಿದ್ದವನನ್ನೇ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾನೆ. ತನ್ನ ಅತ್ತೆ ದುಬೈ ನಿಂದ 44 ಲಕ್ಷ ರೂಪಾಯಿಗಳನ್ನು ಕಳುಹಿಸಿದ್ದು, ಇದನ್ನು ಪತ್ನಿ ಬಳಿ ನೀಡಿದರೆ ನೀರಿನಂತೆ ಖರ್ಚು ಮಾಡುತ್ತಾಳೆ ಎಂದು ಯೋಚಿಸಿದ ಆತ ಹಣ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ. ಈ ಹಣವನ್ನು ತನ್ನ ಮತ್ತೊಂದು ಫ್ಲ್ಯಾಟ್ ನಲ್ಲಿ ಮುಚ್ಚಿಟ್ಟಿದ್ದು ಬಹಿರಂಗವಾಗಿದೆ. ಇದೀಗ ಆತನನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular