ಮುಂಬೈನ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ವಾಹನವನ್ನು ಚಲಿಸುವ ʼಕರೋಕೆʼ ವೇದಿಕೆಯಾಗಿ ಪರಿವರ್ತಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಾಗ ಬಾಲಿವುಡ್ ಕ್ಲಾಸಿಕ್ ಹಾಡುಗಳನ್ನು ಹಾಡುತ್ತಾರೆ. ಕಿಶೋರ್ ಕುಮಾರ್ ಅವರ “ಫಿರ್ ವಹಿ ರಾತ್ ಹೈ” ಹಾಡನ್ನು ಹಾಡುತ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
“ಕನಸುಗಳು ನನಸಾಗದಿದ್ದರೂ, ಅವು ಸಣ್ಣ ಸಂತೋಷವನ್ನು ತರಬಲ್ಲವು” ಎಂಬುದಕ್ಕೆ ಈ ಚಾಲಕ ಉದಾಹರಣೆಯಾಗಿದ್ದಾರೆ. ಮುಂಬೈನ ಈ ಚಾಲಕ ತನ್ನ ರಿಕ್ಷಾವನ್ನು ಕಸ್ಟಮೈಸ್ ಮಾಡಿ ʼಕರೋಕೆʼ ವೇದಿಕೆಯನ್ನಾಗಿ ಮಾಡಿದ್ದಾರೆ.
ಅವರು ಚಾಲನೆ ನಿಲ್ಲಿಸಿದಾಗಲೆಲ್ಲಾ ಹಾಡುತ್ತಾರೆ. 1979 ರ ‘ಘರ್’ ಚಿತ್ರದ ಕಿಶೋರ್ ಕುಮಾರ್ ಅವರ ಜನಪ್ರಿಯ ಹಾಡು “ಫಿರ್ ವಹಿ ರಾತ್ ಹೈ” ಹಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, 1.4 ಮಿಲಿಯನ್ ವೀಕ್ಷಣೆಗಳು ಮತ್ತು 71,000 ಲೈಕ್‌ಗಳನ್ನು ಪಡೆದುಕೊಂಡಿದೆ.
ಈ ವಿಡಿಯೋ ಜುಹುನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಚಿತ್ರೀಕರಿಸಲಾಗಿದ್ದು, ವಿಡಿಯೋದಲ್ಲಿ “ಕರೋಕೆ ಆಟೋರಿಕ್ಷಾ,” “ದಯವಿಟ್ಟು ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಹಂಚಿಕೊಳ್ಳಿ” ಎಂದು ಬರೆದಿರುವುದನ್ನು ಕಾಣಬಹುದು. ಕಡಿಮೆ ಸೌಲಭ್ಯಗಳಿದ್ದರೂ ತಮ್ಮ ಪ್ಯಾಶನ್‌ಗೆ ಅವರು ಹೊಂದಿರುವ ಸಮರ್ಪಣೆಗೆ ನೆಟಿಜನ್‌ಗಳು ಮಂತ್ರಮುಗ್ಧರಾಗಿದ್ದಾರೆ.
“ಈ ರಿಕ್ಷಾ ಘಾಟ್‌ಕೋಪರ್‌ನಲ್ಲಿ ನನ್ನ ಪಕ್ಕದಲ್ಲೇ ಇತ್ತು. ಅವರು ಪ್ರತಿ ಸಿಗ್ನಲ್‌ನಲ್ಲಿ ಹಾಡುತ್ತಾರೆ ಮತ್ತು ಅವರ ಆಟೋದಲ್ಲಿ ಕರೋಕೆ ಇದೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
“ನಾವು ಅವರಿಂದ ಕಲಿಯಬೇಕು; ಅವರು ತಮ್ಮ ಫ್ಯಾಶನ್ ಅನ್ನು ಮರೆಯುವುದಿಲ್ಲ ಮತ್ತು ಜೀವನವನ್ನು ಆನಂದಿಸುತ್ತಾರೆ” ಎಂದು ಮತ್ತೊಬ್ಬರು ಬರೆದಿದ್ದಾರೆ.
“ಅಣ್ಣಾ ತಮ್ಮಿಷ್ಟವನ್ನು ಮಾಡುತ್ತಿದ್ದಾರೆ ಮತ್ತು ಹೆಚ್ಚಿನ ಜನರ ಮುಖದಲ್ಲಿ ನಗುವನ್ನು ಮೂಡಿಸುತ್ತಿದ್ದಾರೆ” ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. “ಜೀವನೋಪಾಯವನ್ನು ಗಳಿಸುತ್ತಾ ಸಂಗೀತ ಮತ್ತು ಹಾಡುವ ಪ್ರೀತಿಯನ್ನು ಬೆನ್ನಟ್ಟುತ್ತಿದ್ದಾರೆ” ಎಂದು ಇನ್ನೊಬ್ಬರು ಹೇಳಿದ್ದಾರೆ.