HomeIndia'ಅಟಲ್ ಸೇತು'ವೆಯಿಂದ ಜಿಗಿದು ಉದ್ಯಮಿ ಸಾವು; 2 ದಿನಗಳಲ್ಲಿ ಎರಡನೇ 'ಆತ್ಮಹತ್ಯೆ'

‘ಅಟಲ್ ಸೇತು’ವೆಯಿಂದ ಜಿಗಿದು ಉದ್ಯಮಿ ಸಾವು; 2 ದಿನಗಳಲ್ಲಿ ಎರಡನೇ ‘ಆತ್ಮಹತ್ಯೆ’

ಮುಂಬೈ: ಮಾತುಂಗಾದ 52 ವರ್ಷದ ಉದ್ಯಮಿಯೊಬ್ಬರು ಬುಧವಾರ ಮುಂಜಾನೆ ಮುಂಬೈ ಟ್ರಾನ್ಸ್ ಹಾಬರ್ಲಿಂಕ್(MTHL) ನ ಭಾಗವಾದ ಅಟಲ್ ಸೇತುದಿಂದ ಜಿಗಿದು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ನ ಡೆಪ್ಯುಟಿ ಮ್ಯಾನೇಜರ್ ಒಬ್ಬರು ಅಟಲ್ ಸೇತು ಮೇಲಿಂದ ಹಾರಿ ಪ್ರಾಣ ಬಿಟ್ಟ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಮಂಗಳವಾರ ನವಿ ಮುಂಬೈನ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತರನ್ನು ಫಿಲಿಪ್ ಹಿತೇಶ್ ಶಾ ಎಂದು ಗುರುತಿಸಲಾಗಿದೆ, ಅವರು ಮಾತುಂಗಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಫಿಲಿಪ್ ಷಾ ಖಿನ್ನತೆಗೆ ಒಳಗಾಗಿದ್ದರು ಮತ್ತು ಇದರಿಂದಾಗಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಕುಟುಂಬದವರು ಶಂಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯಮಿ ಫಿಲಿಪ್ ಶಾ ಬುಧವಾರ ಬೆಳಗ್ಗೆ ಅಟಲ್ ಸೇತು ಮೇಲಿಂದ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದರು, ಮಧ್ಯ ಮುಂಬೈನ ಮಾತುಂಗಾ ನಿವಾಸಿ ಶಾ ಅವರು ತಮ್ಮ ಸೆಡಾನ್ ಕಾರ್ ನಲ್ಲಿ ಅಟಲ್ ಸೇತು ಮೇಲೆ ಬಂದಿದ್ದಾರೆ. ಅಲ್ಲೇ ಕಾರ್ ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೇತುವೆಯ ಮೇಲೆ ಕಾರ್ ನಿಂತಿರುವುದನ್ನು ಸೇತುವೆಯ ಸಿಸಿಟಿವಿ ನಿಯಂತ್ರಣ ಕೊಠಡಿಯ ಸಿಬ್ಬಂದಿ ಗಮನಿಸಿದ್ದು, ನಂತರ ರಕ್ಷಣಾ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ. ಸಿಬ್ಬಂದಿ ಫಿಲಿಪ್ ಶಾ ಸಮುದ್ರಕ್ಕೆ ಹಾರಿದ ಸ್ಥಳಕ್ಕೆ ಧಾವಿಸಿದ್ದಾರೆ.

ಶೋಧ ಕಾರ್ಯಾಚರಣೆಯ ನಂತರ ಕಂಡುಬಂದ ಫಿಲಿಪ್ ಶಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾರ್ ನಲ್ಲಿ ಪತ್ತೆಯಾದ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಮೃತ ವ್ಯಕ್ತಿಯ ಗುರುತನ್ನು ಪತ್ತೆ ಮಾಡಲಾಗಿದೆ. ನವಿ ಮುಂಬೈನ ನ್ಹವಾ ಶೇವಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಳಗ್ಗೆ ರಾಷ್ಟ್ರೀಕೃತ ಬ್ಯಾಂಕ್‌ನ ಉಪ ವ್ಯವಸ್ಥಾಪಕ ಸುಶಾಂತ್ ಚಕ್ರವರ್ತಿ ಅವರು ಸೇವ್ರಿಯ ಸೇತುವೆಯ ಮೇಲೆ ತಮ್ಮ ಕಾರ್ ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular