HomeIndiaBREAKING NEWS: 32 ವರ್ಷಗಳ ಹಿಂದಿನ ಕೇಸ್ ನಲ್ಲಿ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಗೆ ಜೈಲು

BREAKING NEWS: 32 ವರ್ಷಗಳ ಹಿಂದಿನ ಕೇಸ್ ನಲ್ಲಿ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಗೆ ಜೈಲು

32 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಸುದೀರ್ಘ ವಿಚಾರಣೆ ಬಳಿಕ ಈ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದೆ.

ವಾರಣಾಸಿಯ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಇಂದು ತೀರ್ಪು ಹೊರಬಿದ್ದಿದ್ದು, ಆಗಸ್ಟ್ 3, 1991ರಲ್ಲಿ ನಡೆದಿದ್ದ ಅಂದಿನ ಕಾಂಗ್ರೆಸ್ ಶಾಸಕ ಅಜಯ್ ರಾಯ್ ಸಹೋದರ ಅವದೇಶ್ ರಾಯ್ ಅವರ ಹತ್ಯೆ ಪ್ರಕರಣದಲ್ಲಿ ಮುಕ್ತಾರ್ ಅನ್ಸಾರಿಗೆ ಶಿಕ್ಷೆ ವಿಧಿಸಲಾಗಿದ್ದು ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅವದೇಶ್ ರಾಯ್ ಅವರನ್ನು ಅಜಯ್ ರಾಯ್ ಅವರ ನಿವಾಸದ ಮುಂಭಾಗದಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿದ್ದ ಪೊಲೀಸರು ರಾಜಕಾರಣಿ ಕಂ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಯನ್ನು ಬಂಧಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular