ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಊಟ ಸ್ವೀಕರಿಸ್ತಾರೆ ಅಂಬಾನಿ……!

ಮುಖೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ.  ಶತಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಅವರು ಹೊಂದಿದ್ದಾರೆ. ಅವರ ಐಷಾರಾಮಿ ಜೀವನಶೈಲಿ ಪ್ರಪಂಚದಾದ್ಯಂತ  ಪ್ರಸಿದ್ಧಿ ಪಡೆದಿದೆ. ಮುಖೇಶ್‌ ಅಂಬಾನಿ ಕುಟುಂಬ  ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ವಾಸವಾಗಿದೆ. ಅಲ್ಲಿ ಕೆಲಸ ಮಾಡುವ ಚಾಲಕರಿಗೇ ಲಕ್ಷಾಂತರ ರೂಪಾಯಿ ಸಂಬಳ ನೀಡುವ ಮುಕೇಶ್‌ ಅಂಬಾನಿ ಎಷ್ಟೇ ಹಣವಿದ್ರೂ ಅದನ್ನು ತೋರಿಕೆಗೆ ಬಳಕೆ ಮಾಡೋದಿಲ್ಲ. ಮುಕೇಶ್ ಅಂಬಾನಿ ಅವರ ಜೀವನ ತುಂಬಾ ಸರಳವಾಗಿದೆ. ಸಾಮಾನ್ಯರಂತೆ ಜೀವನ ನಡೆಸಲು ಅವರು ಇಷ್ಟಪಡ್ತಾರೆ.

ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ಜೀವನಶೈಲಿ, ಅವರ ಕಾರು, ಅವರ ಸಿಬ್ಬಂದಿ, ಅವರ ಕೆಲಸದ ಬಗ್ಗೆ ಸದಾ ಸುದ್ದಿಗಳು ಬರ್ತಿರುತ್ತವೆ. ಕೆಲ ದಿನಗಳ ಹಿಂದೆ ಮುಖೇಶ್‌ ಅಂಬಾನಿ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮುಖೇಶ್‌ ಅಂಬಾನಿ ಊಟದ ಬಗ್ಗೆ ಟ್ವಿಟ್‌ ಮಾಡಿದ್ದರು.

ಮುಖೇಶ್‌ ಅಂಬಾನಿ ಎಲ್ಲದರಲ್ಲೂ ಶಿಸ್ತನ್ನು ಪಾಲನೆ ಮಾಡ್ತಾರೆ. ಅವರು ಕಚೇರಿಗೆ ಸರಿಯಾದ ಸಮಯಕ್ಕೆ ತಲುಪುತ್ತಾರೆ. ಆಂಟಿಲಿಯಾದಲ್ಲಿಯೇ ಮುಖೇಶ್‌ ಅಂಬಾನಿ ಕಚೇರಿಯಿದ್ರೂ ಅವರ ಸಮಯದಲ್ಲಿ ಬದಲಾವಣೆ ಆಗಿಲ್ಲ. ಮುಖೇಶ್‌ ಅಂಬಾನಿಯವರನ್ನು ಸಿಬ್ಬಂದಿ ಸರ್‌ ಜೊತೆ ಎಂಡಿಎ ಎಂದು ಕರೆಯುತ್ತಾರೆ.

ಮುಖೇಶ್‌ ಅಂಬಾನಿ ಬಗ್ಗೆ ಈ ಎಲ್ಲವನ್ನೂ ಹೇಳಿದ ಸಿಬ್ಬಂದಿ ಮತ್ತೊಂದು ಕುತೂಹಲಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ. ಮುಖೇಶ್‌ ಅಂಬಾನಿ ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಊಟವನ್ನು ಪಡೆಯುತ್ತಾರಂತೆ. ರಿಲಾಯನ್ಸ್‌ ಕಚೇರಿಯಲ್ಲೇ ಕ್ಯಾಂಟೀನ್‌ ಇದೆ. ಈ ಕ್ಯಾಂಟೀನ್‌ ನಲ್ಲಿ ಸಿಗುವ ಊಟ ಅತ್ಯಂತ ಬೆಸ್ಟ್‌ ಸಸ್ಯಹಾರಿ ಊಟ ಎಂದು ಹೆಸರು ಪಡೆದಿದೆ. ಮುಖೇಶ್‌ ಅಂಬಾನಿ ಸಸ್ಯಹಾರಿಯಾಗಿರುವ ಕಾರಣ ಅವರ ಕ್ಯಾಂಟೀನ್‌ ನಲ್ಲಿ ಸಸ್ಯಹಾರಿ ಭೋಜನ ಮಾತ್ರ ಲಭ್ಯವಿದೆ.

ಮುಖೇಶ್‌ ಅಂಬಾನಿ ಸರಳ ಆಹಾರಕ್ಕೆ ಆದ್ಯತೆ ನೀಡಿದ್ದಾರೆ. ದಾಲ್, ರೊಟ್ಟಿ, ತರಕಾರಿ, ರೈತ ಅಲ್ಲದೆ ದಕ್ಷಿಣ ಭಾರತದ ಆಹಾರಗಳಾದ ಭೇಲ್ಪುರಿ, ವಡಾಪಾವ್ ಮತ್ತು ಇಡ್ಲಿಯನ್ನು ತಿನ್ನುತ್ತಾರೆ. ಗುಜರಾತಿನ ದಾಲ್, ರೋಟಿ-ರಾಜ್ಮಾ, ದಹಿ ಬಟಾಟಾ ಪುರಿ ಮತ್ತು ಭೇಲ್ ಅವರಿಗೆ ಇಷ್ಟ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read