HomeKarnatakaಮುಡಾ ಹಗರಣ : 'ಸಿಎಂ ಸಿದ್ದರಾಮಯ್ಯ' ವಿರುದ್ದ ಮತ್ತೆ ವಾಗ್ಧಾಳಿ ನಡೆಸಿದ JDS

ಮುಡಾ ಹಗರಣ : ‘ಸಿಎಂ ಸಿದ್ದರಾಮಯ್ಯ’ ವಿರುದ್ದ ಮತ್ತೆ ವಾಗ್ಧಾಳಿ ನಡೆಸಿದ JDS

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೆ JDS  ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೇ ಉತ್ತರಿಸಿ… *ಸತ್ತ ಲಿಂಗ ಅಲಿಯಾಸ್ ಜವರನ 3 ಎಕರೆ 16 ಗುಂಟೆ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಸ್ವಾಧೀನ ಪಡಿಸಿಕೊಳ್ಳುವ ನಿಮ್ಮ ಆತ್ಮಸಾಕ್ಷಿ “ಸತ್ತು ಹೋಗಿತ್ತೇ” ? *ಪರಿಶಿಷ್ಟರ ಜಮೀನು ಕಬಳಿಸುವಾಗ ನಿಮ್ಮ ಆತ್ಮಸಾಕ್ಷಿ ಅಜ್ಞಾತವಾಸದಲ್ಲಿತ್ತೇ ? ಎಂದು ಕಿಡಿಕಾರಿದ್ದಾರೆ.

2013ರ ಚುನಾವಣಾ ಅಫಿಡವಿಟ್ ನಲ್ಲಿ ನಿಮ್ಮ ಪತ್ನಿ ಬಳಿಯಿರುವ 3 ಎಕರೆ16 ಗುಂಟೆ ಜಮೀನಿನ ಮಾಹಿತಿ ಉಲ್ಲೇಖಿಸದೆ ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ಹೇಳುವಾಗ ತಮ್ಮ ಆತ್ಮಸಾಕ್ಷಿ ಕುರುಡಾಗಿತ್ತೇ? *ಮುಡಾದಲ್ಲಿ ಅಕ್ರಮವಾಗಿ ಪಡೆದ 14 ಸೇಟುಗಳಿಗೆ 62 ಕೋಟಿ ಕೇಳಲು ನಿಮ್ಮ ಆತ್ಮಸಾಕ್ಷಿ ಅನುಮತಿ ಕೊಟ್ಟಿತ್ತೇ ? *ಮುಡಾ ಹಗರಣದಲ್ಲಿ ಎ1 ಆರೋಪಿಯಾದ ಮೇಲೆ 14 ಸೈಟ್ ಸರೆಂಡರ್ ಮಾಡಲು ನಿಮ್ಮ ಆತ್ಮಸಾಕ್ಷಿ ಒಪ್ಪಿತೇ ? *ವಾಲ್ಮೀಕಿ ನಿಗಮದ ಹಣವನ್ನು ಕದ್ದು ಕಳ್ಳಮಾರ್ಗದಲ್ಲಿ ಚುನಾವಣೆಗೆ ಬಳಸಿಕೊಂಡಾಗ ನಿಮ್ಮ ಆತ್ಮಸಾಕ್ಷಿಗೆ ಏನು ಮಾಡುತ್ತಿತ್ತು ಸಿಎಂ ಸಿದ್ದರಾಮಯ್ಯ ? “ಮದ್ಯಪಾನ ಮುಕ್ತ ಸಮಾಜ” ಮಹಾತ್ಮ ಗಾಂಧಿ ಅವರ ಆಶಯ, ಧ್ಯೇಯವಾಗಿತ್ತು. ಆದರೆ ನೀವು ಬಾರ್ & ವೈನ್ ಸ್ಟೂರ್ ಗಳಿಗೆ ಹಣವನ್ನು ಅಕ್ರಮವಾಗಿ ಟ್ರಾನ್ಸ್ ಫರ್ ಮಾಡಿ, “ಹೆಂಡ, ಸಾರಾಯಿ ಹೊಳೆ” ಹರಿಸುವಾಗ ನಿಮ್ಮ ಆತ್ಮಸಾಕ್ಷಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿತ್ತೇ ? ಆತ್ಮಸಾಕ್ಷಿಯಿಂದ ರಾಜೀನಾಮೆ ಕೊಟ್ಟು ನಿಮ್ಮ ರಾಜಕೀಯ ನೈತಿಕತೆ ಉಳಿಸಿಕೊಳ್ಳಿ.  ಸತ್ಯಮಾರ್ಗದಲ್ಲಿ ನಡೆದ ಮಹಾತ್ಮ ಗಾಂಧಿಯವರು ಬರಿಗೈ ಫಕೀರ ! ತಾವು .? ತಮ್ಮ ಆತ್ಮಸಾಕ್ಷಿ ನ್ಯಾಯಾಲಯ ಏನು ಹೇಳುತ್ತದೆ ? ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular