HomeKarnatakaBIG NEWS: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ: ನಾಳೆ ಐಜಿಪಿಗೆ ತನಿಖೆಯ ಸಂಪೂರ್ಣ ವರದಿ...

BIG NEWS: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ: ನಾಳೆ ಐಜಿಪಿಗೆ ತನಿಖೆಯ ಸಂಪೂರ್ಣ ವರದಿ ಸಲ್ಲಿಸಲಿರುವ ಲೋಕಾಯುಕ್ತ ತನಿಖಾಧಿಕಾರಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ವಿರುದ್ಧ ಕೇಳಿಬಂದಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿಗಳು ನಾಳೆ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ.

ಮೈಸೂರು ತನಿಖಾಧಿಕಾರಿಯೂ ಆಗಿರುವ ಲೋಕಾಯುಕ್ತ ಎಸ್ ಪಿ  ಉದೇಶ್, ಮುಡಾ ಹಗರಣದ ತನಿಖೆಯ ಸಂಪೂರ್ಣ ವರದಿಯನ್ನು ನಾಳೆ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

ಲೋಕಾಯುಕ್ತ ಐಜಿಪಿ ಸುಬ್ರಹ್ಮಣೇಶ್ವರ್ ರಾವ್ ಅವರಿಗೆ ನಾಳೆ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ. ನಾಳೆ ವರ್ದಿ ಪರಿಶೀಲಿಸಿದ ಬಳಿಕ ಐಜಿಪಿ, ಎಡಿಜಿಪಿ ಅವರಿಗೆ ವರದಿ ಕಳುಹಿಸಿಕೊಡಲಿದ್ದಾರೆ. ಪರಿಶೀಲನೆ ಬಳಿಕ ಕೋರ್ಟ್ ಗೆ ತನಿಖೆಯ ಅಂತಿಮ ವರದಿ ಸಲ್ಲಿಕೆಯಾಗಲಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular