BREAKING: ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಭತ್ತ, ರಾಗಿ, ಬೇಳೆ, ಎಣ್ಣೆಕಾಳುಗಳ ಬೆಂಬಲ ಬೆಲೆ ಪರಿಷ್ಕರಣೆ | MSP revision

ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ಪ್ರಮುಖ ಬೆಳೆಗಳಾದ ಬೇಳೆ, ಎಣ್ಣೆಕಾಳು, ಭತ್ತ, ಹತ್ತಿ, ರಾಗಿ ಮತ್ತು ಮೆಕ್ಕೆಜೋಳದ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕರಿಸಿ ರೈತರಿಗೆ ದೊಡ್ಡ ಪರಿಹಾರವನ್ನು ನೀಡಿದೆ.

ಕಳೆದ ದಶಕದಲ್ಲಿ ಅಂದರೆ, 2013-14 ಕ್ಕೆ ಹೋಲಿಸಿದರೆ ದರಗಳು ಪ್ರಮುಖ ಹೆಚ್ಚಳ ಕಂಡಿವೆ. ಹಿಂದಿನ MSP ಸೈಕಲ್‌ಗಿಂತ 35,000 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರೈತರು MSP ಯ ಕಾರಣದಿಂದಾಗಿ ಕನಿಷ್ಠ 2 ಲಕ್ಷ ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಪರಿಷ್ಕೃತ ದರ

ಭತ್ತ: ಹಿಂದಿನ MSP ಗಿಂತ 117 ರೂ. ಹೆಚ್ಚು ಮತ್ತು 2013-14 ರಲ್ಲಿ 1,310 ರೂ.ನಿಂದ 2,300 ರೂ.ಗೆಹೆಚ್ಚಿದೆ

ಹತ್ತಿ: 7,121 ರೂ.

ಹತ್ತಿ 2: ಹಿಂದಿನ MSP ಗಿಂತ 7,521 ರೂ.

ಜೋಳ: 3,371 ರೂ.

ರಾಗಿ: 2,490 ರೂ.

ಬಾಜ್ರಾ: 2,625 ರೂ.

ಮೆಕ್ಕೆಜೋಳ: 2,225 ರೂ.

ಮೂಂಗ್: 8,682 ರೂ.

ತೂರ್: ಕಳೆದ MSP ಯಿಂದ 7,550 ಕ್ಕಿಂತ 500 ರೂ. ಹೆಚ್ಚು

ಉರಾದ್: ಕಳೆದ MSP ಯಿಂದ 450 ರೂ.ಹೆಚ್ಚಾಗಿ 7,400 ರೂ.

ಎಳ್ಳು: 632 ರೂ. ಏರಿಕೆಯಾಗಿ 9,267 ರೂ.

ಕಡಲೆಕಾಯಿ: 6,783 ರೂ.

ರೇಪ್ಸೀಡ್ಸ್: 8,717 ರೂ.

ಸೂರ್ಯಕಾಂತಿ: 7,280 ರೂ.

ಸೋಯಾಬೀನ್: 4,892 ರೂ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read