HomeIndiaWatch Video : ವಿಮಾನದಲ್ಲಿ M.S. ಧೋನಿ ವಿಡಿಯೋ ವೈರಲ್; ಕೇವಲ 3 ಗಂಟೆಯೊಳಗೆ ‘ಕ್ಯಾಂಡಿ...

Watch Video : ವಿಮಾನದಲ್ಲಿ M.S. ಧೋನಿ ವಿಡಿಯೋ ವೈರಲ್; ಕೇವಲ 3 ಗಂಟೆಯೊಳಗೆ ‘ಕ್ಯಾಂಡಿ ಕ್ರಶ್’ 30 ಲಕ್ಷ ಮಂದಿಯಿಂದ ಡೌನ್ಲೋಡ್

ಧೋನಿ ಕ್ಯಾಂಡಿ ಕ್ರಶ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ ಬೆನ್ನಲ್ಲೇ 3 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಭಾರತ ಕಂಡ ಹೆಮ್ಮೆಯ ನಾಯಕ, ಆದರೆ ಅವರ ನಿವೃತ್ತಿಯ ಬಳಿಕ ಐಪಿಎಲ್ ನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಜನಪ್ರಿಯತೆ ಇನ್ನೂ ಕುಸಿದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಇತ್ತೀಚೆಗೆ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಎಂಎಸ್ ಧೋನಿ ವಿಂಡೋ ಸೀಟ್ ನಲ್ಲಿ ಕೂತಿದ್ದರು. ಧೋನಿ ಅಭಿಮಾನಿ ಗಗನಸಖಿ ಒಂದು ಟ್ರೇನಲ್ಲಿ ಚಾಕೋಲೇಟ್ ಸೇರಿದಂತೆ ಇನ್ನಿತರ ತಿನಿಸುಗಳೊಂದಿಗೆ ಧೋನಿಯ ಬಳಿ ಹೋಗುತ್ತಾರೆ. ಧೋನಿ ಗಗನಸಖಿಯಿಂದ ಚಾಕೊಲೇಟ್ ಸ್ವೀಕರಿಸಿ ಥ್ಯಾಂಕ್ಸ್ ಹೇಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಧೋನಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ. ಇದನ್ನು ಗಮನಿಸಿದ ಅಭಿಮಾನಿಗಳು ನಾನು ಇನ್ನು ಕ್ಯಾಂಡಿ ಕ್ರಶ್ ಆಡುತ್ತೇನೆ ಎಂದು ಬರೆದು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಹುತೇಕ ಅಭಿಮಾನಿಗಳು ಕ್ಯಾಂಡಿ ಕ್ರಶ್ ಡೌನ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ 3 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

ಧೋನಿ, ವೀಡಿಯೊ ಗೇಮ್ ಗಳ ಕಟ್ಟಾ ಅಭಿಮಾನಿ ಕೂಡ. ಧೋನಿ ಕಾಲ್ ಆಫ್ ಡ್ಯೂಟಿ, ಫಿಫಾ ಮತ್ತು ಪಬ್ಜಿ ಆಡುವುದಕ್ಕೆ ಇಷ್ಟ ಪಡುತ್ತಾರೆ. ಈ ತಿಂಗಳ ಆರಂಭದಲ್ಲಿ, ಭಾರತದ ಮಾಜಿ ನಾಯಕ ಮುಂಬೈ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular