ರಿಷಬ್ ಪಂತ್ ಅವರ ತಂಗಿ ಸಾಕ್ಷಿ ಪಂತ್ ಅವರ ಮದುವೆ ಮುಸ್ಸೋರಿಯಲ್ಲಿ ಭರ್ಜರಿಯಾಗಿ ನಡೀತು. ಈ ಸಂಭ್ರಮದ ಸಮಾರಂಭದಲ್ಲಿ ಎಂ.ಎಸ್. ಧೋನಿ, ಸುರೇಶ್ ರೈನಾ ಮತ್ತು ರಿಷಬ್ ಪಂತ್ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಪಂತ್ ದುಬೈನಿಂದ ಸೋಮವಾರ ಮುಸ್ಸೋರಿಗೆ ಬಂದಿದ್ದರು. ಮಾರ್ಚ್ 11 ರಂದು ಧೋನಿ ಮತ್ತು ಅವರ ಕುಟುಂಬ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಡೆಹ್ರಾಡೂನ್‌ಗೆ ಬಂದಿತ್ತು.
ಮದುವೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದು ಧೋನಿ, ರೈನಾ ಮತ್ತು ಪಂತ್ “ದಮಾ ದಮ್ ಮಸ್ತ್ ಕಲಂದರ್” ಹಾಡಿಗೆ ಕುಣಿದು ಕುಪ್ಪಳಿಸಿದ್ದು. ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದ ಭಾರತದ ಮಾಜಿ ನಾಯಕ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಸಹ ಆಟಗಾರ ರೈನಾ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಅವರ ಸ್ಟೆಪ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
@StanMSD ಎಂಬ ಫ್ಯಾನ್ ಖಾತೆಯು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಈಗಾಗಲೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕಾಮೆಂಟ್ ವಿಭಾಗವು ಖುಷಿಯಿಂದ ತುಂಬಿದ್ದು, “ಖಂಡಿತವಾಗಿಯೂ ಸುಂದರವಾದ ವೈಬ್ಸ್!” ಎಂದು ಒಬ್ಬ ಯೂಸರ್ ಬರೆದರೆ, ಇನ್ನೊಬ್ಬರು “ಧೋನಿಯನ್ನು ಹೀಗೆ ನೋಡಲು ಸಿಗುವುದು ಅಪರೂಪ” ಎಂದು ಹೇಳಿದ್ದಾರೆ.
MS Dhoni , Raina and Rishabh Pant vibing together at Pant Sister’s weeding
pic.twitter.com/PnR6GrEMm7
—
(@StanMSD) March 12, 2025